Advertisement

ಅರಸೀಕೆರೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ: ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

11:59 AM Aug 27, 2020 | sudhir |

ಅರಸೀಕೆರೆ: ತಾಲೂಕಿನ ಹತ್ತಾರು ಕೆರೆಗಳಲ್ಲಿ ಹಲವು ವರ್ಷಗಳಿಂದ ನಿತ್ಯ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ದಂಧೆ ಕೋರರ ಹಾವಳಿಗೆ ಮಿತಿಯಿಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದೆಲ್ಲೆಡೆ ವರುಣ ಅಬ್ಬರಿಸಿ ಬೊಬ್ಬಿರಿದ ಪರಿಣಾಮ ಕೆರೆಕಟ್ಟೆಗಳು ಸಂಪೂರ್ಣ ಭರ್ತಿಯಾಗಿವೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಬಾಣಾವರ ಹೋಬಳಿಯ ಶ್ಯಾನೆಗೆರೆ ಗ್ರಾಮದ ಚಿಕ್ಕ ಕೆರೆ, ಪುರೆಲ್ಕಹಳ್ಳಿ ಕುರುವಂಕ, ಜಾವಗಲ್‌ ಹೋಬಳಿ ಕೊಳಗುಂದ, ಅರಕರೆ, ನೇರ್ಲಿಗೆ, ಕಣಕಟ್ಟೆ, ಕಸಬಾ ಹೋಬಳಿ ವ್ಯಾಪ್ತಿಯ ತಳಲೂರು, ಕೆಲ್ಲೆಂಗೆರೆ, ಹಬ್ಬನ ಘಟ್ಟ, ನಾಗತಿಹಳ್ಳಿ, ಮುರುಂಡಿ, ಹಾರನಳ್ಳಿ, ಗಂಡಸಿ ಹೋಬಳಿ ವ್ಯಾಪ್ತಿಯ ಮುದುಡಿ, ಗಂಡಸಿ, ಯರಗನಾಳು, ಸೇರಿದಂತೆ 150ಕ್ಕೂ ಹೆಚ್ಚು ಕೆರೆಗಳು ಸಂಪೂರ್ಣ ಬರಿದಾಗಿವೆ.

Advertisement

ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಮರಳು ದಂಧೆಕೋರರು ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದಾರೆ ಎನ್ನುವ ಸಾರ್ವಜನಿಕರ ದೂರುಗಳು ಕೇಳಿ ಬರುತ್ತಿವೆ. ಕೃತ್ಯವನ್ನು ಪ್ರಶ್ನಿಸುವ ನಾಗರಿಕರ ಮೇಲೂ ಹಲ್ಲೆ ನಡೆದಿದ್ದು ಈ ಸಂಬಂಧ ಪೊಲೀಸರು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನಲಾಗುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂಬರುವ ದಿನಗಳಲ್ಲಿ ಮರಳಿನ ಸೆಲೆ ಸಂಪೂರ್ಣ ನಾಶವಾಗಲಿದ್ದು ನೀರು ಸಂಗ್ರಹಗೊಳ್ಳುವ ಸಾಧ್ಯತೆ ಅತ್ಯಂತ ಕ್ಷೀಣಿಸಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸೂರಿಲ್ಲದವರಿಗೆ ಸರ್ಕಾರ ಬಸವ ವಸತಿ, ಇಂದಿರಾ ಆವಾಸ್‌, ಅಂಬೇಡ್ಕರ್‌ ಸೇರಿದಂತೆ ಅನೇಕ ಯೋಜನೆಗಳ ಅಡಿಯಲ್ಲಿ ವಸತಿ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಇದನ್ನೇ ಗುರಿಯಾಗಿಸಿಕೊಂಡಿರುವ ಕೆಲವರು ಯೋಜನೆಯ ಫ‌ಲಾನುಭವಿಗಳಿಗೆ ಮರಳು ನೀಡದೇ ದುಬಾರಿ ಬೆಲೆಗೆ ಮಾರಲು ಬೇರೆಡೆಗೆ ಸಾಗಾಟಕ್ಕೆ ಮುಂದಾಗಿದ್ದಾರೆ. ಪರಿಣಾಮವಾಗಿ ಬಡವರ್ಗದ ಜನರು ಸಾವಿರಾರೂ ರೂ. ತೆತ್ತು ಹೊಳೆ ಮರಳು ಖರೀದಿಸುವ ದುಸ್ಥಿತಿ ನಿರ್ಮಾಣಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next