Advertisement

ಅರಂತೋಡು : ಲಘು ಭೂಕಂಪನ, ಮನೆಯ ಗೋಡೆ ಬಿರುಕು

01:07 AM Jul 11, 2022 | Team Udayavani |

ಅರಂತೋಡು : ಸುಳ್ಯ ತಾಲೂಕು ಅರಂತೋಡು ಗ್ರಾಮದಲ್ಲಿ ರವಿವಾರ ಮುಂಜಾನೆ ಲಘು ಭೂಕಂಪನ ಸಂಭವಿಸಿದ್ದು ತೊಡಿಕಾನ ಗ್ರಾಮದ ಮುಪ್ಪಸೇರು ವೇದಾವತಿ ಅವರ ಮನೆಯ ಗೋಡೆ ಬಿರುಕು ಬಿಟ್ಟಿದೆ.

Advertisement

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಇದನ್ನು ದೃಢ ಪಡಿಸಿದ್ದು, ರಿಕ್ಟರ್‌ ಮಾಪಕದಲ್ಲಿ 1.8 ತೀವ್ರತೆ ದಾಖಲಾಗಿರುವುದಾಗಿ ತಿಳಿಸಿದೆ. ಇದರ ಪ್ರಭಾವದಿಂದ ಅರಂತೋಡು, ಗೂನಡ್ಕ ಮತ್ತು ತಾಲೂಕಿನ ವಿವಿಧ ಭಾಗಗಳಲ್ಲಿ ಬೆಳಗ್ಗೆ 6.22ಕ್ಕೆ ಭೂಕಂಪನದ ಅನುಭವ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next