Advertisement

ಅರಂತೋಡು: ಪ್ರಾಕೃತಿಕ ವಿಕೋಪ ಸ್ಥಳಕ್ಕೆ ಅಧಿಕಾರಿಗಳು ಭೇಟಿ

11:18 AM Mar 19, 2023 | Team Udayavani |

ಅರಂತೋಡು: ಸಂಪಾಜೆ ಗ್ರಾಮದ ವಿವಿಧ ಪ್ರಾಕೃತಿಕ ವಿಕೋಪ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Advertisement

ಕಲ್ಲುಗುಂಡಿ ಪೇಟೆಯಲ್ಲಿ ಸಂಪಾಜೆ ಗಡಿಕಲ್ಲು, ಕೈಪಡ್ಕ, ಪೇರಡ್ಕ, ಪೆಳ್ತಡ್ಕ ಪರಿಸರದಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಬಹಳಷ್ಟು ಅಂಗಡಿ, ಮನೆ, ಕೃಷಿ ಭೂಮಿಗೆ ಹಾನಿಯಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ಗ್ರಾ.ಪಂ. ಅಧ್ಯಕ್ಷರಾದ ಜಿ.ಕೆ. ಹಮೀದ್ ಗೂನಡ್ಕ ಟಿ. ಎಂ. ಶಾಹಿದ್ ತೆಕ್ಕಿಲ್, ಕೊಂದಲಕಾಡ್ ನಾರಾಯಣ ಭಟ್, ಸುಳ್ಯಕೊಡಿ ರವಿಶಂಕರ್ ಭಟ್, ಸತ್ಯ ನಾರಾಯಣ ಭಟ್ ದರ್ಕಾಸ್, ರಹೀಮ್ ಬೀಜದಕಟ್ಟೆ ನೇತೃತ್ವದಲ್ಲಿ ನಾಲ್ಕೂರ್ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಮನವಿ ಸಲ್ಲಿಸಲಾಗಿತ್ತು.

ಈ ಮನವಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ಸಂಜೆಯ ವೇಳೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡವನ್ನು ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿ ತಾಂತ್ರಿಕ ವರದಿ ತಯಾರಿಸಿ, ನದಿಯಲ್ಲಿ ಇರುವ ಹೂಳು ತುಂಬಿರುವ ಜಿಪಿಎಸ್ ಫೋಟೋ ತೆಗೆದುಕೊಂಡು ನಂತರ ಡ್ರೋನ್ ಮೂಲಕ ಚಿತ್ರೀಕರಣ ವ್ಯವಸ್ಥೆ ಮಾಡಲಾಗುತ್ತದೆ. ಈ ಬಗ್ಗೆ ಗ್ರಾಮದ ಎಲ್ಲಾ ಪ್ರದೇಶಗಳ ಪರಿಶೀಲನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಗಣಿ ಮತ್ತು ಭೂ ಗರ್ಭ ಇಲಾಖೆಯ ಉಪ ನಿರ್ದೇಶಕ ಲಿಂಗರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್, ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ತಹಶೀಲ್ದಾರ್ ಮಂಜುನಾಥ್, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸುಂದರಯ್ಯ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಹನುಮಂತ ರಾಯಪ್ಪ, ವಲಯ ಅರಣ್ಯಾಧಿಕಾರಿ ಗಿರೀಶ್, ಮಣಿಕಂಠ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಷ್ಣು ಕಾಮತ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಹೇಮಂತ್, ಅರಣ್ಯ ಪಾಲಕ ಚಂದ್ರು, ಗ್ರಾಮ ಕರಣಿಕ ಮಿಯಾ ಸಾಬ್ ಮುಲ್ಲಾ, ಪೊಲೀಸ್ ಇಲಾಖೆಯ ನಾಗೇಶ್, ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ ಎಸ್. ಕೆ. ಹನೀಫ್, ಅಬೂಸಾಲಿ ಗೂನಡ್ಕ ಊರ ಪ್ರಮುಖರಾದ ಪದ್ಮಯ್ಯ ಗೌಡ, ಕೇಶವ ಬಂಗ್ಲೆಗುಡ್ಡೆ, ಹಸೈನಾರ್ ಎ. ಕೆ. ನಾಗೇಶ್ ಪಿ. ಆರ್, ಕಿಶೋರ್ ಕುಮಾರ್, ಶಮೀರ್ ತಾಜ್ ಕಿಪಾಯತ್ ಕೂಲಿ ಶೆಡ್, ಮಂಜುನಾಥ್, ಅಧಿಕಾರಿ ವರ್ಗದವರು, ಊರ ಪಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next