Advertisement

Aranthodu ಕಾಂತಮಂಗಲ : ಕೊಲೆ ಆರೋಪಿಯ ಬಂಧನ

11:46 PM Jun 18, 2024 | Team Udayavani |

ಅರಂತೋಡು: ಸುಳ್ಯ ತಾಲೂಕಿನ ಕಾಂತಮಂಗಲ ಶಾಲಾ ಜಗಲಿಯಲ್ಲಿ ಕಲ್ಲು ಎತ್ತಿ ಹಾಕಿ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಕಡಬ ತಾಲೂಕಿನ ಎಡಮಂಗಲ ಗ್ರಾಮದ ಉದಯ ಕುಮಾರ್‌ ನಾಯ್ಕ (35) ಬಂಧಿತ ಆರೋಪಿ. ರವಿವಾರ ರಾತ್ರಿ ಮೂಲತ ವಿರಾಜಪೇಟೆಯ ವಸಂತ (45) ಎಂಬ ವ್ಯಕ್ತಿಯ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈಯಲಾಗಿತ್ತು. ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಉದಯ ಕುಮಾರ್‌ಗೆ ಬಾರೊಂದರಲ್ಲಿ ವಸಂತನ ಪರಿಚಯವಾಗಿದ್ದು, ರವಿವಾರ ರಾತ್ರಿ ಕಾಂತಮಂಗಲಕ್ಕೆ ಅಟೋ ರಿಕ್ಷಾದಲ್ಲಿ ಬಂದು ಶಾಲಾ ಜಗಲಿಯಲ್ಲಿ ಮಲಗಿದ್ದಾರೆ. ವಸಂತ ಬಳಿ 800 ರೂಪಾಯಿ ಹಣ ಇರುವುದನ್ನು ಗಮನಿಸಿ ಕೊಲೆ ಮಾಡಿದ್ದು, ಬಳಿಕ ಬೆಳಗ್ಗೆ ಹಣ ಹಾಗೂ ಮೊಬೈಲ್‌ ಜತೆ ಅಲ್ಲಿಂದ ಪರಾರಿಯಾಗಿದ್ದ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಸಿಸಿಕೆಮರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯೂ ಮನೆಗೆ ತೆರಳದೆ ಸಣ್ಣಪುಟ್ಟ ಕಳವು ಮಾಡಿ ಕುಡಿತಕ್ಕೆ ಹಣ ಹೊಂದಿಸಿಕೊಳ್ಳುತ್ತಿದ್ದು, ಎಲ್ಲೆಂದರಲ್ಲೇ ಇರುತ್ತಿದ್ದುದು ಬೆಳಕಿಗೆ ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next