ಅರಂತೋಡು: ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಅವರ ಮೃತ ದೇಹ ಪತ್ತೆಯಾದ ಘಟನೆ ಸುಳ್ಯದಲ್ಲಿ ಜ.29 ರಂದು ಸಂಜೆ ನಡೆದಿದೆ.
ಸುಳ್ಯ ಮೇನಾಲ ನಿವಾಸಿ 51 ವರ್ಷದ ಅಬ್ದುಲ್ಲ (ಅಂದ) ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ಅವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ತೋಟದಲ್ಲಿ ಕೆಲಸ ಮಾಡಿಕೊಂಡಿದ್ದವರು ನಂತರ ತುಂಬಾ ಹೊತ್ತು ಕಾಣದೆ ಇದ್ದಾಗ ಮನೆಯವರು ತೋಟದ ಅಕ್ಕ ಪಕ್ಕದಲ್ಲಿ ಹುಡುಕಲು ಆರಂಭಿಸಿದ್ದರು. ಕೆರೆಯ ಸಮೀಪ ಅವರು ಕೆಲಸಕ್ಕೆ ಬಳಸುತ್ತಿದ್ದ ಸಾಮಾಗ್ರಿ ಇರುವುದನ್ನು ಕಂಡು ಕೆರೆಯಲ್ಲಿ ನೋಡಿದಾಗ ಅಲ್ಲಿ ಮೃತ ದೇಹ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ.
Related Articles
ಸುಳ್ಯ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಸುಳ್ಯ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ ಎಂಬ ಮಾಹಿತಿ ಇದೆ.