Advertisement

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

01:40 PM Oct 17, 2021 | Team Udayavani |

ಅರಕಲಗೂಡು : ಅರಕಲಗೂಡು ಪಟ್ಟಣದಲ್ಲಿ ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ  ಬೆಳ್ಳಂ ಬೆಳಗ್ಗೆ  ಪೋಲೀಸರ ದಾಳಿ ಮಾಡಿ ವ್ಯಕ್ತಿಯನ್ನು ಬಂಧಿಸಿದ ಘಟನೆ ನಡೆದಿದೆ.

Advertisement

ಅರಕಲಗೂಡು ಠಾಣೆ ಪಿಎಸ್ ಐ ಮಾಲಾ  ಮತ್ತು ಪೊಲೀಸ್ ಸಿಬ್ಬಂದಿ  ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಂತೇಮರೂರು ರಸ್ತೆಯ ಬನ್ನಿ ಮಂಟಪದ‌ ಎದುರು  ರಾಜಾರೋಷವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಬಕಾಷ್ ಎಂಬುವನನ್ನು ಬಂಧಿಸಿದ್ದಾರೆ.

ಈ ವೇಳೆ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿದ್ದ ಗೋ ಮಾಂಸವನ್ನು ಪೊಲೀಸರು ಸೀಜ್ ಮಾಡಿದ್ದಾರೆ.  ಅರಕಲಗೂಡು ಪಟ್ಟಣದಲ್ಲಿ ಅಕ್ರಮ ಗೋ‌ಮಾಂಸ  ಮಾರಾಟಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ.

ಗೋ‌ಮಾಂಸ ಮರಾಟಕ್ಕೆ ಬ್ರೇಕ್ ಹಾಕಿರುವುದಕ್ಕೆ ಜಾಮೀಯಾ ಮಸೀದಿ ಅಧ್ಯಕ್ಷರಾದ ಸಲೀಂ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next