Advertisement

ಕಾನೂನು ಗೌರವವಿಸದ ಕಾಂಗ್ರೆಸ್ ದೇಶದ ಜನರ ವಿಶ್ವಾಸ ಕಳೆದುಕೊಳ್ಳುತ್ತದೆ: ಅರಗ ಜ್ಞಾನೇಂದ್ರ

12:49 PM Jun 22, 2022 | Team Udayavani |

ಚಿಕ್ಕಮಗಳೂರು :  ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೊಂದು, ಜನರಿಗೊಂದು ಕಾನೂನಿಲ್ಲ ಎಲ್ಲರಿಗೂ ಒಂದೇ ಕಾನೂನು, ಈ ನೆಲದ ಕಾನೂನುನನ್ನ ಎಲ್ಲರೂ ಗೌರವಿಸಬೇಕೆಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಾಂಗ್ರೆಸ್‌ ವಿರುದ್ಧ ಕಿಡಿಕಾಡಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ತಪ್ಪಿದ್ದಾಗ ಇಡಿ ಕರೆದು ವಿಚಾರಣೆ ಮಾಡಿದಾಗ ಪ್ರತಿಭಟನೆ ಮಾಡುತ್ತಾರೆ. ಅವರಿಗೆ ಈ ದೇಶದ ಕಾನೂನಿನ ಬಗ್ಗೆ ಗೌರವವಿಲ್ಲ  ಕಾಂಗ್ರೆಸ್ ದೇಶದ ಜನರ ವಿಶ್ವಾಸ ಕಳೆದುಕೊಳ್ಳುತ್ತಾರೆ, ಜನ ತುಚ್ಛವಾಗಿ ನೋಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ, ಹುಚ್ಚು ಬಿಡಿಸಲು ಪ್ರಪಂಚದಲ್ಲೇ ಔಷಧಿ ಇಲ್ಲ: ಈಶ್ವರಪ್ಪ

ಮಹಾರಾಷ್ಟ್ರ ಅತೃಪ್ತ ಶಾಸಕರು ರೇಸಾರ್ಟ್ ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, 2019 ಬಿಜೆಪಿ-ಶಿವಸೇನೆ ಒಟ್ಟಿಗೆ ಜನರ ಬಳಿ ಹೋಗಿದ್ದರು, ಜನ ತೀರ್ಪು ನೀಡಿದ್ದರು. ಉದ್ಧವ್ ಠಾಕ್ರೆ ಉದ್ದಟತನ ಮಾಡಿ 8 ಪಕ್ಷ ಸೇರಿಸಿಕೊಂಡು ಸಿಎಂ ಆಗಿದ್ರು. ಎಲ್ಲರಿಗೂ ಗೊತ್ತಿತ್ತು ಇದು ಬಹಳ ದಿನ ನಡೆಯಲ್ಲ, ಈ ಸರ್ಕಾರಕ್ಕೆ ಆಯಸ್ಸು ಕಡಿಮೆ ಅಂತ. ಇಂದು ಅದರಂತೆಯೇ ಎಲ್ಲಾ ನಡೆಯುತ್ತಿದೆ, ಇದು ಮೊದಲೇ ಗೊತ್ತಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next