ಶಿವಮೊಗ್ಗ : ರಾಜ್ಯದಲ್ಲಿ ಪಿಎಸ್ಐ ಹಗರಣ ಹಾಗೂ ಸ್ಯಾಂಟ್ರೋ ರವಿ ಪ್ರಕರಣಗಳಾಗಿದ್ದು ಇವರೆಡರಲ್ಲೂ ಗೃಹ ಸಚಿವ ಆರಗ ಜ್ಞಾನೇಂದ್ರನೇ ಮೊದಲ ಆರೋಪಿಯಾಗಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರ ಅನುಮತಿ ಪಡೆದು, ಸಿಎಂ ಗೃಹ ಸಚಿವರ ವಿರುದ್ಧ ಕೇಸ್ ದಾಖಲಿಸಬೇಕು. ಮನೆ ಮುಂದೆ ಹಣ ತೆಗೆದು ಕೊಂಡರೂ, ಇವರಿಗೆ ಕೇಸ್ ಮಾಡಿಕೊಳ್ಳಲು ಆಗಲಿಲ್ಲ. ಹೊಸನಗರದಲ್ಲಿ ಗುತ್ತಿಗೆದಾರ ಚಂದ್ರಶೇಖರ್ ಎಲ್ಲಾ ಕೆಲಸ ಮಾಡುತ್ತಿದ್ದಾರೆ. ಈ ಚಂದ್ರಶೇಖರ್ ಜ್ಞಾನೇಂದ್ರ ಅವರ ಅಕ್ಕನ ಮಗ. ತೀರ್ಥಹಳ್ಳಿಯಲ್ಲಿ ಲೇ ಔಟ್ ದಂಧೆ ನಡೆಯುತ್ತಿದೆ. ಜ್ಞಾನೇಂದ್ರರವರ ಮಗ ಸರ್ಕಾರಿ ಜಮೀನನ್ನು ಖಾಸಗಿ ಜಮೀನು ಎಂದು ಹೇಳುತ್ತಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಫೆಬ್ರವರಿಯಲ್ಲಿ ದೊಡ್ಡ ಪ್ರತಿಭಟನೆ ಮಾಡುತ್ತೇವೆ. ಆರಗ ಜ್ಞಾನೇಂದ್ರ ಅವರು ರಾಜೀನಾಮೆ ಕೊಡಬೇಕು. ಸ್ಯಾಂಟ್ರೋ ರವಿ ಹೇಳಿದಂತೆ ಇವರೇ ಟ್ರಾನ್ಸ್‌ಫರ್ ಮಾಡಿದ್ದಾರೆ. ಈಗ ಹಣದ ವ್ಯವಹಾರ ನಡೆದಿಲ್ಲ ಅಂದರೆ ಹೇಗೆ.? ಸ್ಯಾಂಟ್ರೋ ರವಿ ಎಲ್ಲೂ ಅಡಗಿಲ್ಲ, ಇವರೇ ಅಡಗಿದ್ದಾರೆ. ಅಧಿಕಾರದಲ್ಲಿರುವುದಕ್ಕೆ ಇವರು ಬದುಕಿದ್ದಾರೆ. ಇಲ್ಲವಾದರೆ ಇವರೇ ಆರೋಪಿ. ಟ್ರಾನ್ಸ್ ಫರ್ ಮಾಡಿ ಎಂದು ಸ್ಯಾಂಟ್ರೋ ರವಿ ಹೇಳಿದ್ದಾನೆ,ಅದಕ್ಕೆ ಇವರು ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಇವರು ಯಾಕೇ ಹೇಳಲಿಲ್ಲ ಎಂದು ಕಿಡಿ ಕಾರಿದ್ದಾರೆ.
ಸ್ವತಃ ಅಡಿಕೆ ಬೆಳೆಗಾರರಾಗಿ ಇವರೇ ಅಡಿಕೆ ಬೆಳೆಯಬೇಡಿ ಅನ್ನುತ್ತಾರೆ. ಇವರು ತೋಟ ಹಾಕಿಸುತ್ತಲೇ ಇದ್ದಾರೆ. ರೈತರಿಗೆ ಪರ್ಯಾಯ ಬೆಳೆ ಬೆಳೆಯಿರಿ ಅನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.
Related Articles
ಮಾಧ್ಯಮಗಳ ಮೂಲಕ, ಈ ವ್ಯಕ್ತಿಯಿಂದ ರಾಜಿನಾಮೆ ಕೊಡಿಸಿ ಎಂದು ಮುಖ್ಯಮಂತ್ರಿಗಳಿಗೆ ನಾನು ಕೇಳಿಕೊಳ್ಳುತ್ತೇನೆ. ಕಳೆದ ಬಾರಿ ನಂದಿತಾ ಆತ್ಮಹತ್ಯೆ ಕೇಸ್ ನಲ್ಲಿ ರಾಜಕೀಯ ಮಾಡಿದರು. ಈಗ ಬಿಜೆಪಿಯವರಿಗೆ ಬೇರೆ ಏನೂ ಕೆಲಸ ಇಲ್ಲದೆ ಕುಕ್ಕರ್ ಹಿಡಿದು ಕೊಂಡು ಓಡಾಡುತ್ತಿದ್ದಾರೆ.
ದೇಶದ ಮೊದಲ ಭಯೋತ್ಪಾದಕ ನಾಥೋರಾಮ್ ಗೂಡ್ಸೆ, ಅಹಿಂಸೆ, ಸತ್ಯವನ್ನು ಕೊಂದವನು. ಆತನನ್ನೂ ಸಮರ್ಥನೆ ಮಾಡಿಕೊಳ್ಳುವವರು ಬಿಜೆಪಿಯವರು.ರಾಜಕೀಯ ಕಾರಣಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದರು.
ಹಾಸಿಂ ಅವರ ಕಟ್ಟಡದಲ್ಲಿರುವ ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಎನ್ ಐಎ ಪರಿಶೀಲನೆ ಕುರಿತು ಪ್ರತಿಕ್ರಿಯಿಸಿ, ನಾವು ಹಣ ಕೊಟ್ಟರೆ, ಆ ಕಟ್ಟಡ ಖಾಲಿ ಮಾಡಲು ರೆಡಿ ಇದ್ದೇವೆ.ಅಗ್ರಿಮೆಂಟ್ ಗೂ ಕುಕ್ಕರ್ ಗೂ ಏನು ಸಂಬಂಧ. ಕುಕ್ಕರ್ ನವನು ಜ್ಞಾನೇಂದ್ರ ಕಡೆಯವನೇ ಇರಬೇಕು. ಸಿಬಿಐ ಮೇಲೆ ನನಗೆ ನಂಬಿಕೆ ಇಲ್ಲ, ಆ ಸಂಸ್ಥೆ ಮೋದಿ ಹೇಳಿದ ಹಾಗೆ ನಡೆದುಕೊಳ್ಳುತ್ತದೆ. ನನ್ನ ಮನೆಗೆ ಯಾವಾಗ ಬೇಕಿದ್ದರೇ ಬಂದು ಹೋಗಲಿ.ಹತ್ತು ಸಾವಿರ ಕೂಡ ಸಿಗುವುದಿಲ್ಲ ಎಂದರು.