Advertisement

ಕಾಂಗ್ರೆಸ್ ನವರು ಹೇಳಿದ ಕೂಡಲೇ ಹಗರಣ ಆಗಲ್ಲ, ತನಿಖೆಯಾಗಬೇಕು : ಆರಗ ಜ್ಞಾನೇಂದ್ರ ಕಿಡಿ

07:19 PM Apr 12, 2022 | Team Udayavani |

ಶಿವಮೊಗ್ಗ : ಉಡುಪಿ ಖಾಸಗಿ ಹೋಟೆಲ್ ನಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು ಉಡುಪಿಯ ಖಾಸಗಿ ಹೋಟೆಲ್ ನಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತಪಟ್ಟಿದ್ದು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಎಫ್ಎಸ್ಎಲ್ ಅಧಿಕಾರಿಗಳು ಹೋಟೆಲ್ ಬಳಿ ಹೋಗಿದ್ದಾರೆ‌. ಆದರೆ ಮೃತರ ಸಹೋದರ ಘಟನಾ ಸ್ಥಳಕ್ಕೆ ಬರುವುದಾಗಿ ಹೇಳಿರುವುದರಿಂದ ಅವರ ಬರುವಿಕೆಗಾಗಿ ಕಾಯಲಾಗುತ್ತಿದೆ. ದುರ್ದೈವದ ಸಂಗತಿಯೆಂದರೆ ಉಡುಪಿ ಪೊಲೀಸರು ಹೋಟೆಲ್ ಕೊಠಡಿ ಒಳಗೆ ಹೋಗುವುದಕ್ಕೂ ಮೊದಲೇ ಕಾಂಗ್ರೆಸ್ ಕಾರ್ಯಕರ್ತರು ಈಶ್ವರಪ್ಪ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಲಾರಂಭಿಸಿದ್ದಾರೆ ಎಂದು ಗುಡುಗಿದ್ದಾರೆ.

ಬಳಿಕ ಮಾತನಾಡಿದ ಅವರು ಪೊಲೀಸ್ ಅಧಿಕಾರಿಗಳಿಗೆ ಪ್ರಕರಣವನ್ನು ಅತ್ಯಂತ ಪಾರದರ್ಶಕವಾಗಿ ಯಾವುದೇ ಗೊಂದಲ ಇಲ್ಲದಂತೆ ನಡೆಯಬೇಕು ಹಾಗೆ ಎಲ್ಲಾ ಆಯಾಮದಲ್ಲೂ ತನಿಖೆಯಾಗುತ್ತೆ‌ ಅದನ್ನು ನಮ್ಮ ಪೊಲೀಸ್ ಅಧಿಕಾರಿಗಳು ನಿರ್ವಹಿಸುತ್ತಾರೆ ಎಂದರು.

ಇದನ್ನೂ ಓದಿ : ಗೋವಾ: ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಿಲ್ಲ: ಸಿಎಂ ಸಾವಂತ್ ಸ್ಪಷ್ಟನೆ

ಯಾರೋ ಹೇಳಿದಾಕ್ಷಣ ಯಾರದೋ ಮೇಲೆ ಕೇಸ್ ದಾಖಲಿಸಲು ಆಗಲ್ಲ, ವಿಚಾರಣೆ ಆಗುತ್ತಿದೆ, ಯಾರ ಮೇಲೆ ಕೇಸ್ ದಾಖಲಿಸಬೇಕು ಎಂದು ಪೊಲೀಸರು ನಿರ್ಧಾರ ಮಾಡುತ್ತಾರೆ. ಕಾಂಗ್ರೆಸ್ ನವರು ಹೇಳಿದ್ರೂ.. ಇನ್ನೋಬ್ರೂ ಹೇಳಿದ್ರೂ ಅಂತಾ ಏನಾದರೂ ಮಾಡಲು ಆಗಲ್ಲ.. ಎಂದು ಹೇಳಿದರು.

Advertisement

ಕಾಂಗ್ರೆಸ್ ನವರು ಹೇಳಿದ್ರೂ.. ಇನ್ನೋಬ್ರೂ ಹೇಳಿದ್ರೂ ಅಂತಾ ಏನಾದರೂ ಮಾಡಲಿಕ್ಕೆ ಬರಲ್ಲ.. ಯಾರು ಏನು ಓಡಿ ಹೋಗಲ್ಲ, ಗಡಿಬಿಡಿ ಏಕೆ..? ತನಿಖೆಯಾಗಿ ತಪ್ಪಿತಸ್ಥರು ಇದ್ರೇ ಕ್ರಮವಾಗುತ್ತೆ. ಪರ್ಸೆಟೇಂಜ್ ತಗೋಂಡಿದ್ರೇ ಯಾರು ತಗೊಂಡಿದ್ದಾರೆ. ಯಾರು ಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶ ಇದೆ ಅದನ್ನು ಬಹಿರಂಗ ಮಾಡಲಿ ಎಂದರು.

ಯಾರನ್ನೂ ಉಳಿಸುವ ಪ್ರಶ್ನೆಯೇ ಇಲ್ಲ. ತಪ್ಪಾದ್ರೇ ತಪ್ಪು ಎಂದು ಹೇಳಬೇಕು. ಯಾರೋ ಹಗರಣ ಎಂದು ಹೇಳಿದಾಕ್ಷಣ ಅವು ಹಗರಣ ಅಲ್ಲ.ಏನು ಹಗರಣ ಆಗಿದೆ, ಸಾಬೀತು ಮಾಡಬೇಕು. ಕಾಂಗ್ರೆಸ್ ನವರು ಹೇಳಿದ ಕೂಡಲೇ ಹಗರಣ ಆಗಲ್ಲ. ಇಂತವರು ತೆಗೆದುಕೊಂಡಿದ್ದಾರೆ. ಇಂತವರು ಕೊಟ್ಟಿದ್ದಾರೆ ಎಂದು ಸಾಕ್ಷಿ ಸಮೇತ ಹೇಳಲಿ. ಎಲ್ಲದಕ್ಕೂ ಕಾನೂನು, ಕಾಯ್ದೆ ಕಾನೂನು ಇದೆ, ಮೊದಲು ಸಂತೋಷ್ ಇರುವ ರೂಂ ಓಪನ್ ಮಾಡಿ, ಪಾರದರ್ಶಕ ನಡೆಯಲಿ, ತಪ್ಪಿತಸ್ಥರು ಇದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next