ತೀರ್ಥಹಳ್ಳಿ : ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಜನರ ಜೊತೆಯೇ ಬೆರೆಯುವ ವ್ಯಕ್ತಿ.ತಾವು ಬೇರೆ ಬೇರೆ ಕಡೆ ಹೋಗುವಾಗ ದಾರಿ ಮಧ್ಯೆ ಅಪಘಾತವಾದರೆ ತಕ್ಷಣ ಸ್ಪಂದಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಹೊರಡುತ್ತಾರೆ. ಇದೇ ರೀತಿಯ ಘಟನೆ ಇಂದೂ ನಡೆದಿದೆ.
ಇಂದು ಬೆಜ್ಜವಳ್ಳಿ ಕನ್ನಂಗಿ ನಡುವೆ ಬೈಕ್ ಸವಾರನೊಬ್ಬ ಅಪಘಾತವಾಗಿ ತೀವ್ರ ಸ್ವರೂಪ ಗಾಯಗೊಂಡಿದ್ದು, ಅದೇ ಮಾರ್ಗವಾಗಿ ಬೆಜ್ಜವಳ್ಳಿಯಿಂದ ಕೋಣಂದೂರಿಗೆ ತೆರಳುತ್ತಿದ್ದ ಶಾಸಕ ಆರಗ ಜ್ಞಾನೇಂದ್ರರವರು ತಮ್ಮ ಬೆಂಗಾವಲು ವಾಹನದಲ್ಲಿ ಅಪಘಾತವಾದವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ.
ಈ ಸಮಯದಲ್ಲಿ ತುರ್ತು ಕರೆ ಮಾಡಿದ ಆಂಬುಲೆನ್ಸ್ ಕೂಡ ಬಂದಿದ್ದರಿಂದ ನಂತರ ಗಾಯಳುವನ್ನೂ ಆಂಬುಲೆನ್ಸ್ ನಲ್ಲಿ ಕಳಿಸಿಕೊಟ್ಟರು. ಹಲವಾರು ಬಾರಿ ಅಪಘಾತವಾದಾಗ ಆರಗ ಜ್ಞಾನೇಂದ್ರ ತಮ್ಮ ಬೆಂಗಾವಲು ವಾಹನದಲ್ಲೇ ಗಾಯಳುವನ್ನು ಕಳಿಸಿ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ: S1 EP 102 ಪಿಯೋನ್ ಆಗಿದ್ದ ವ್ಯಕ್ತಿಯೊಬ್ಬರು ದೊಡ್ಡ ಬ್ರಾಂಡ್ ಕಟ್ಟಿದ ಕಥೆ