ಬೆಂಗಳೂರು/ಮಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರ ಬಜರಂಗ ದಳ ಮತ್ತು ಆರೆಸ್ಸೆಸ್ ನಿಷೇಧ ಹೇಳಿಕೆ ವಿರುದ್ಧ ಆಕ್ರೋಶ ಶುಕ್ರವಾರ ಮತ್ತಷ್ಟು ತೀವ್ರ ವಾ ಗಿದ್ದು, ಮಾಜಿ ಸಿಎಂ ಬಸ ವ ರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಆರ್. ಅಶೋಕ್ ತಿರು ಗಿ ಬಿ ದ್ದಿ ದ್ದಾರೆ.
ಆರೆಸ್ಸೆಸ್ ಮತ್ತು ಬಜ ರಂಗ ದಳ ವನ್ನು ಕಾಂಗ್ರೆಸ್ ಸಚಿವರು ನಿಷೇಧಿಸಿ ತೋರಿ ಸಲಿ ಎಂದು ಬೊಮ್ಮಾಯಿ ಸವಾಲು ಹಾಕಿ ದ್ದರೆ, ಆರೆಸ್ಸೆಸ್ ಒಂದೇ ಒಂದು ಶಾಖೆ ನಿಷೇ ಧಿ ಸಿ ದರೂ ಸರಕಾ ರವೇ ಇರು ವು ದಿಲ್ಲ ಎಂದು ಅಶೋಕ್ ಎಚ್ಚ ರಿಕೆ ನೀಡಿ ದ್ದಾರೆ. ಇನ್ನು ಬಜರಂಗ ದಳ, ಆರೆಸ್ಸೆಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ಸೇ ಇರುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರ ರಾಜಕೀಯವೇ ಅಂತ್ಯವಾಗುತ್ತದೆ ಎಂದು ಕಟೀಲು ಪ್ರತಿಕ್ರಿಯಿಸಿದ್ದಾರೆ.
ಬೊಮ್ಮಾಯಿ ಕಿಡಿ
ಕಾಂಗ್ರೆಸ್‌ನ ದುರಹಂಕಾರ ಮತ್ತು ದ್ವೇಷದ ಆಡಳಿತದ ಆಯುಷ್ಯ ಲೋಕಸಭಾ ಚುನಾ ವಣೆಯ ವರೆಗೆ ಮಾತ್ರ ಎಂದು ಬೊಮ್ಮಾಯಿ ಭವಿಷ್ಯ ನುಡಿದಿ ದ್ದಾರೆ. ಆರೆಸ್ಸೆಸ್, ಬಜರಂಗ ದಳ ನಿಷೇಧ ಮಾಡುವು ದಾಗಿ ಕಾಂಗ್ರೆಸ್ ಸಚಿವರು ಹೇಳುತ್ತಿದ್ದಾರೆ. ನಿಷೇಧಿಸಿ ತೋರಿಸಿ ಎಂದು ನಾನು ಕಾಂಗ್ರೆಸ್‌ಗೆ ಸವಾಲು ಹಾಕ ಬಯಸುತ್ತೇನೆ. ಯಾವುದೇ ಸಂಘ ಸಂಸ್ಥೆಯನ್ನು ನಿಷೇಧ ಮಾಡುವ ಅಧಿಕಾರ ಇವರಿಗಿಲ್ಲ. ಅದನ್ನು ಮಾಡುವುದು ಕೇಂದ್ರ ಸರಕಾರ ಎಂದು ಬೊಮ್ಮಾಯಿ ಹೇಳಿದ್ದಾರೆ.
ಅಶೋಕ್ ಎಚ್ಚರಿಕೆ
ಆರೆಸ್ಸೆಸ್‌ನ ಲಕ್ಷಾಂತರ ಶಾಖೆಗಳ ಪೈಕಿ ಒಂದೇ ಒಂದು ಶಾಖೆಯನ್ನು ನಿಷೇಧಿಸಿ ದರೂ ಸರಕಾರ ಮೂರು ತಿಂಗಳು ಕೂಡ ಇರುವುದಿಲ್ಲ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿ ದ್ದಾರೆ. ನಿಮ್ಮ ಅಪ್ಪ, ಅಜ್ಜಿ, ಮುತ್ತಾತನಿಂದಲೂ ಆರೆಸ್ಸೆಸ್ ನಿಷೇಧ ಮಾಡಲು ಸಾಧ್ಯ ವಾಗಲಿಲ್ಲ ಎಂದು ಛೇಡಿಸಿದ್ದಾರೆ.
Related Articles
ಬಜರಂಗದಳ, ಆರೆಸ್ಸೆಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಪಕ್ಷವೇ ಇರುವುದಿಲ್ಲ. ಸಿದ್ದರಾಮಯ್ಯ ರಾಜಕೀಯ ಅಂತ್ಯ ವಾಗುತ್ತದೆ ಎಂದು ನಳಿ ನ್ ಕು ಮಾರ್ ಕಟೀಲು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿ, ಕಾಂಗ್ರೆಸ್ ಮೆರವಣಿಗೆ, ವಿಜಯೋತ್ಸವ, ಸಭೆಗಳಲ್ಲೇ ಪಾಕಿಸ್ಥಾನ ಪರ ಘೋಷಣೆ ಕೇಳಿಬಂದಿದೆ. ತಾಕತ್ತು ಇದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸವಾಲೆಸೆದರು.