Advertisement

ಅಡಿಕೆಗೆ ಎಲೆಚುಕ್ಕೆ ಮತ್ತು ಪರ್ಯಾಯ ಮುಂದೇನು? ಶಿರಸಿಯಲ್ಲಿ ಸಮಾಲೋಚನೆ!

09:17 PM Mar 14, 2023 | Team Udayavani |

ಶಿರಸಿ: ಅಡಿಕೆಗೆ ಕಳೆದ ನಾಲ್ಕೈದು ವರ್ಷಗಳಿಂದ ತಗುಲಿರುವ ಎಲೆ ಚುಕ್ಕೆ ರೋಗ ಭಾರೀ ಹಾನಿ ಮಾಡುತ್ತಿದ್ದು, ಇದರ ಕುರಿತು ಹಾಗೂ ಪರ‍್ಯಾಯ ವ್ಯವಸ್ಥೆಯ ಕುರಿತು ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ತಜ್ಞ ಡಾ.ವೆಂಕಟ್ರಮಣ ಹೆಗಡೆ ತಿಳಿಸಿದ್ದಾರೆ.

Advertisement

ಈಗಾಗಲೇ ಕಳಸ, ಶೃಂಗೇರಿ, ತೀರ್ಥಹಳ್ಳಿ ಭಾಗಗಳಲ್ಲಿ ಈಗಾಗಲೇ ಶೇ. 25ರಿಂದ 95 ರಷ್ಟು ಫಸಲು ನಷ್ಟ ಆಗುತ್ತಿದೆ. ಕೊಲೆಟೊಟ್ರೈಕಂ ಗ್ಲಿಯೋಸ್ಪೊರೈಡ್ಸ ಮತ್ತಿತರೆ ಶಿಲೀಂಧ್ರಗಳ ಸಂಯೋಜಿತ ಧಾಳಿಯಿಂದ ಬರುವ ಈ ರೋಗ ನಿಧಾನವಾಗಿ ಇತರೆ ಸಾಂಪ್ರದಾಯಿಕ ಅಡಿಕೆ ಬೆಳೆ

ಪ್ರದೇಶಗಳಿಗೆ ಹಬ್ಬುತ್ತಿದೆ. ಶಿರಸಿಯ ಭಾಗಕ್ಕೆ ಇದೇ ಸಪ್ಟೆಂಬರಿನಲ್ಲಿ ಕಾಲಿಟ್ಟಿದೆಯಾದರೂ ಈಗಾಗಲೇ ನೇರ್ಲದ್ದ, ಗೋಳಿ, ಜಾನ್ಮನೆ, ಬಾಳೇಸರ ಮುಂತಾದ ಭಾಗಗಳಲ್ಲಿ ಸಾಕಷ್ಟು ಹಾನಿ ಮಾಡಿದೆ.

ಈ ಶಿಲೀಂಧ್ರಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಔಷಧಗಳು ಇವೆಯಾದರೂ ಸಪ್ಟೆಂಬರ್ ಅವಧಿಯಲ್ಲಿ ಭಾರೀ ಮಳೆ ಮತ್ತು ಪರಿಣಾಮಕಾರೀ ಸಾಮೂಹಿಕ ಸಿಂಪಡಣೆ ಸಾಧ್ಯವಾಗದಿರುವುದು ಮುಂತಾದ ಕಾರಣಗಳಿಂದ ಕ್ಷೇತ್ರ ಮಟ್ಟದಲ್ಲಿ ರೋಗ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಹಳದಿ ಎಲೆ ರೋಗದಂತೆ ಈ ಎಲೆಚುಕ್ಕೆ ರೋಗ ಕೂಡ ಖಾಯಂ ಆಗುವ ಅಪಾಯ ಕಂಡುಬರುತ್ತಿದೆ. ಹಾಗಾಗಿ ರೈತರು ಸಾಧ್ಯವಿರುವ ಎಲ್ಲ ಉಪಬೆಳೆ ಅಂತರ ಬೆಳೆಗಳನ್ನು ಈ ಕೂಡಲೆ ಆರಂಭಿಸಿ ಅಡಿಕೆ ಫಸಲಿನಲ್ಲಾಗಬಹುದಾದ ನಷ್ಟವನ್ನು ಸರಿದೂಗಿಸಲು ಮುಂದಾಗಬೇಕಿದೆ.

ಆದರೆ, ಬಹುತೇಕ ಬೆಳೆಗಾರರು ಅವೈಜ್ಞಾನಿಕ ಸುದ್ದಿಗಳನ್ನು ನಂಬಿ ನಮ್ಮ ಅಡಿಕೆಗೆ ಏನೂ ಆಗಲಿಕ್ಕಿಲ್ಲ ಎಂಬ ಭ್ರಮೆಯಲ್ಲಿ ರೋಗ ಪ್ರಸಾರ ನೋಡಿಯೂ ದಿನ ದೂಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳೆಗಾರರನ್ನು ಎಚ್ಚರಿಸಿ, ಪರ್ಯಾಯ ಬೆಳೆಗಳ ಕುರಿತು ಮಾರ್ಗದರ್ಶನ ಮಾಡಲು ನಗರದಲ್ಲಿ ಮಾ೧೮ರಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಫಾರ್ಮ್‌ಟಿವಿ, ಟಿ.ಎಸ್.ಎಸ್. ಹಾಗೂ ಟಿ.ಎಂ.ಎಸ್.ಗಳ ಸಹಯೋಗದಲ್ಲಿ ಎ.ಪಿ.ಎಂ.ಸಿ. ಮಾರುಕಟ್ಟೆ ಪ್ರಾಂಗಣದ ಟಿ.ಆರ್.ಸಿ. ಬ್ಯಾಂಕಿನ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಯ ರೈತರಲ್ಲದೇ ಯಾವುದೇ ಭಾಗದ ಅಡಿಕೆ ಬೆಳೆಗಾರರು ಉಚಿತವಾಗಿ ಭಾಗವಹಿಸಬಹುದು. ಹಿರಿಯ ವಿಜ್ಞಾನಿ ಡಾ. ವೇಣುಗೋಪಾಲ ಹಾಗೂ ಅನುಭವಿ ಬೆಳೆಗಾರರು ಮಾರ್ಗದರ್ಶನ ಮಾಡಲಿದ್ದಾರೆ. ಮುಂಜಾನೆ ರೋಗದ ತೀವೃತೆ ಚರ್ಚೆಯಾದರೆ, ಮದ್ಯಾಹ್ನ ಪರ್ಯಾಯಗಳ ವಿಮರ್ಶೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9980534320 ಸಂಪರ್ಕಿಸಬಹುದು ಎಂದು ಡಾ.ಹೆಗಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ದ್ರಾಕ್ಷಿ-ವೈನ್ ಬೋರ್ಡ್ ಅಧ್ಯಕ್ಷರಾಗಿ ರುದ್ರಗೌಡರ ಅಧಿಕಾರ ಸ್ವೀಕಾರ

Advertisement

Udayavani is now on Telegram. Click here to join our channel and stay updated with the latest news.

Next