Advertisement

75 ಸಾಧಕರಿಗೆ ಅರಭಾವಿ ಮತಕೇತ್ರ ರತ್ನ ಪ್ರಶಸ್ತಿ

04:21 PM Aug 17, 2022 | Team Udayavani |

ಮೂಡಲಗಿ : ಕೆಎಂಎಫ್‌ ಅಧ್ಯಕ್ಷ ಹಾಗೂ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಬಿಜೆಪಿ ಕಾರ್ಯಕರ್ತರು ಸಾಧಕರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

Advertisement

ಅರಭಾವಿ ಬಿಜೆಪಿ ಮಂಡಲ ಹಾಗೂ ಶ್ರೀಮತಿ ಭೀಮವ್ವ ಲಕ್ಷ್ಮಣರಾವ ಜಾರಕಿಹೊಳಿ ಮೆಮೊರಿಯಲ್‌ ಚಾರಿಟೆಬಲ್‌ ಟ್ರಸ್ಟ್‌ ಆಶ್ರಯದಲ್ಲಿ ಪಟ್ಟಣದ ಬಸವ ಮಂಟದಲ್ಲಿ ಜರುಗಿದ ಸಾಧಕರ ಸನ್ಮಾನ ಉದ್ಘಾಟಿಸಿ, ಅರಭಾವಿ ಮತಕ್ಷೇತ್ರದ 75 ಸಾಧಕರಿಗೆ ಅರಭಾವಿ ಮತಕ್ಷೇತ್ರ ರತ್ನ ಪ್ರಶಸ್ತಿ ನೀಡಿ ಮಾತನಾಡಿದ ಅವರು, 75 ಸಾಧಕರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯರನ್ನು ಸನ್ನಾನಿಸಿ ಗೌರವಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರು.

ಹಾರೂಗೇರಿ ಸಾಹಿತಿ ವಿ.ಎಸ್‌.ಮಾಳಿ ಮಾತನಾಡಿ, ಪ್ರಧಾನಿ ಮೋದಿ ಅವರ ಹರ್‌ ಘರ್‌ ತಿರಂಗ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ ಸಿಕ್ಕಿದ್ದು ಕಾಶ್ಮೀರದಿಂದ ಕನ್ಯಾಕುಮಾರಿವರೆಗ ತ್ರಿವರ್ಣ ಧ್ವಜ ಹಾರಾಡುತ್ತಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಮಾತನಾಡಿ, ಬಿಜೆಪಿ ಅರಭಾವಿ ಮಂಡಲದ ಬೈಕ್‌-ಟ್ರಾಕ್ಟರ್‌ ರ್ಯಾಲಿಗಳಿಗೆ ಕ್ಷೇತ್ರಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ಮತಕ್ಷೇತ್ರದ ಸ್ವಾತಂತ್ರ್ಯ ಹೋರಾಟಗಾರರು, ರೈತರು, ಸಾಹಿತ್ಯ, ಕ್ರೀಡೆ, ಪತ್ರಕರ್ತರು ಮೊದಲಾದ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕನಸಾಗಿತ್ತು ಎಂದರು.

ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಪದಾಧಿಕಾರಿಗಳಾದ ಪರಸಪ್ಪ ಬಬಲಿ, ಮಹಾಂತೇಶ ಕುಡಚಿ, ಬಿಜೆಪಿ ಎಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಈರಪ್ಪ ಢವಳೇಶ್ವರ, ಪುಸರಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಪುಸರಭೆ ಸದಸ್ಯರಾದ ಜಯಾನಂದ ಪಾಟೀಲ, ಗಪಾರ್‌ ಡಾಂಗೆ, ರವಿ ಸಣ್ಣಕ್ಕಿ, ಪಾಂಡು ಮಹೇಂದ್ರಕರ, ಹಣಮಂತ ಸತರಡ್ಡಿ, ಸಿದ್ದು ದುರದುಂಡಿ, ಮಲ್ಲು ಯಾದವಾಡ, ವಿಠuಲ ಸುಳ್ಳನ್ನವರ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next