ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತಾ, ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತ ದಿಕ್ಕು ತಪ್ಪುವ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭ ಲಕ್ಷಣವಾಗುವುದಿಲ್ಲ.
Advertisement
ಮನೆಯ ಸೊಬಗಿದೆ ಎಂದು ನಾವು ಅಕ್ವೇರಿಯಂ ಅಥವಾ ಗಿಣಿ, ಪಾರಿವಾಳ, ನವಿಲು ಗುಬ್ಬಿ ಇತ್ಯಾದಿ ಹಕ್ಕಿಗಳನ್ನು, ಲವ್ ಬರ್ಡ್ಸ್ ಗಳಂಥ ಬಣ್ಣದ ಮೈ ಹೊದಿಕೆಯ ಹಕ್ಕಿಗಳನ್ನುಇಟ್ಟು ಆರೈಕೆ ಮಾಡುವುದನ್ನು ಗಮನಿಸುತ್ತೇವೆ. ಅಕ್ವೇರಿಯಂ ಇಟ್ಟು ಬಣ್ಣಬಣ್ಣದ ಅವುಗಳ ಹೊರ ಮೈ ಮಿಂಚಲ್ಲಿ ತೆವಳುತ್ತಾ, ಈಜುತ್ತಾ ತಾವು ಹೊರಬರಲಾರದ ಗಾಜಿನ ಗೋಡೆಗಳಿಗೆ ಢೀ ಕೊಡುತ್ತ, ಮೂತಿ ಬಡಿಯುತ್ತ, ಮೂತಿ ಉರುಟುರುಟಾಗಿಸುತ್ತಾ ಓಡಾಡುವ ಮೀನುಗಳು ಕಣ್ಣಿಗೆಆಹ್ಲಾದವನ್ನು ಕೊಡುತ್ತವೆಂಬುದನ್ನು ಆನಂದಿಸುತ್ತೇವೆ.
ಕೂಡಾ ಈ ರೀತಿಯ ಅಕ್ವೇರಿಯಂ ಜೋಡಣೆ ಉತ್ತಮ. ಮದುವೆಯಾಗಬೇಕಾದ ದಾಂಪತ್ಯ ಆಕಾಂಕ್ಷಿಗಳಿಗೂ ಇದು
ಒಳ್ಳೆಯದು. ಹೀಗಿರುವ ಅಕ್ವೇರಿಯಂನಲ್ಲಿ ಕಡುಗಪ್ಪು ಪೂರ್ತಿಯಾಗಿ ಮೈಬಣ್ಣವಾಗಿರುವ ಮೀನುಗಳಿರದಂತೆ ನೋಡಿಕೊಳ್ಳಿ. ಬಂಗಾರದ ಬಣ್ಣ, ನಸು ನೀಲಿ, ನಸುಗೆಂಪು, ಬಿಳಿಕಪ್ಪುಗಳು ಪಟ್ಟೆಯಾದ ಮೀನುಗಳು ಆಲೆಯಾಕಾರದ ವಜ್ರದ ಸ್ವರೂಪದಲ್ಲಿರುವ ಮೀನುಗಳು ಅತ್ಯುತ್ಸಾಹದಿಂದ ಪುಟಿಯುವಂತೆ, ಕತ್ತು, ಮೂತಿ ಕೊಂಕಿಸುತ್ತಾ ಓಡಾಡುತ್ತಿರಲಿ. ಸೂರ್ಯ ಬರುವ ಮುನ್ನ ಆಹಾರವನ್ನು ಹಾಕುವ ಪದ್ಧತಿ ಮಾಡಬೇಡಿ. ಮುಂಜಾನ ಸೂರ್ಯ
ಬಂದಾಗಲೇ ಆಹಾರದ ಗೋಲಿಗಳು ಅಕ್ವೇರಿಯಂ ಒಳಗೆ ಮೀನುಗಳಿಗೆ ನೀಡುವ ಅಭ್ಯಾಸ ನೆರವೇರಲಿ. ಒಳಗಿನ ನೀರು
ನಸು ನೀಲಿಯನ್ನು ಹಳದಿ ಛಾಯೆಯ ಬೆಳಕಲ್ಲಿ ಹೊಂದುವಂತೆ ಪ್ರತಿಫಲಿಸುವಂತಾಗಲಿ. ಹೊರಸೂಸುವಂಥ ರೀತಿಯಲ್ಲಿ ಇರಲಿ.
Related Articles
Advertisement
ಯಾಕೆಂದರೆ ಗುಬ್ಬಿಗಳು ತಮ್ಮ ಆಹಾರವಾದ ಕೀಟಗಳನ್ನು ಮನೆಯೊಳಗೆ ತಂದುಕೊಂದು ತಿನ್ನುವ ಅದರ ಭೋಜನ ವಿಶೇಷ ಸಂಭವಿಸಕೂಡದು. ಗುಬ್ಬಿಗಳನ್ನು ಈ ವಿಷಯದಲ್ಲಿ ಮನುಷ್ಯ ಪ್ರಯತ್ನಗಳೊಡನೆ ಈ ನೆಲೆಯಲ್ಲಿ ನಿಯಂತ್ರಿಸಲಾಗದು. ಈ ಕಾರಣದಿಂದಾಗಿ ಗುಬ್ಬಿಗಳು ಮನೆಯೊಳಗಡೆ ನಿಷಿದ್ಧವೇ ಆಗಿವೆ. ಉಳಿದಂತೆ ಗಿಣಿ ಲವ್ ,ಬರ್ಡ್ಸ್ ಪಾರಿವಾಳಗಳು ಸಹಾ ಮನೆಯೊಳಗೆ ನಿಷಿದ್ಧವೇ ಆಗಿವೆ. ಇವು ಮನೆಯೊಳಗೆ ತನ್ನಿಂತಾನೆ ವಸತಿ ನಿರ್ಮಿಸಿಕೊಳ್ಳುವುದು ಬೇಡ. ಜೊತೆಗೆ ಪಂಜರವೊಂದನ್ನು ನಿರ್ಮಿಸಿ ರೆಕ್ಕೆಗಳನ್ನು ಸಂಯೋಜಿಸಿಕೊಂಡ ಇವುಗಳ
ಅಸಹಾಯಕ ಸೆರೆವಾಸವೂ ಬೇಡ. – ಅನಂತಶಾಸ್ತ್ರಿ