Advertisement

ಎ. 13-16: ಕದ್ರಿ ಪಾರ್ಕ್‌ನಲ್ಲಿ ಆರ್ಕಿಡ್‌ ಪ್ರದರ್ಶನ, ಮಾರಾಟ

12:17 PM Apr 11, 2019 | Sriram |

ಪತ್ರಿಕಾಭವನ: ಆಲಿಯಾ ಆರ್ಕಿಡ್‌ ಸಂಸ್ಥೆ ವತಿಯಿಂದ ಆರ್ಕಿಡ್‌ ಪ್ರದರ್ಶನ, ಮಾರಾಟ ಎ. 13ರಿಂದ 16ರ ವರೆಗೆ ನಗರದ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕ್ವೀನಿ ಲಸ್ರಾದೋ ತಿಳಿಸಿದ್ದಾರೆ.

Advertisement

ಕರಾವಳಿಯ ತಾಪಮಾನಕ್ಕೆ ಅಳವಡಿಸಿಕೊಂಡು ಮೊಳಕೆ ಹಂತದಿಂದ ಸಣ್ಣ ಪ್ರಮಾಣದಲ್ಲಿ ಹೂಬಿಡುವ ಹಂತಕ್ಕೆ ಹೈಬ್ರಿàಡ್‌ಗಳನ್ನು ಬೆಳೆಸಿ ಆರ್ಕಿಡ್‌ ಸಸ್ಯಗಳನ್ನು ಸಂಸ್ಥೆ ಸಾರ್ವಜನಿಕರಿಗೆ ನೀಡುವಲ್ಲಿ ಶ್ರಮಿಸುತ್ತಿದೆ. ಮಲೇಷ್ಯಾ, ಥೈಲ್ಯಾಂಡ್‌ಗಳಿಂದಲೂ ಚಿಕ್ಕ ಆರ್ಕಿಡ್‌ ಗಿಡಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆಲಿಯಾ ಆರ್ಕಿಡ್‌ ಕೇರ್‌ ಕರ್ನಾಟಕ ಸರಕಾರದ ತೋಟಗಾರಿಕಾ ಇಲಾಖೆಯಡಿ ನೋಂದಾಯಿತ ಸಂಸ್ಥೆಯಾಗಿದೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ವಿವರಿಸಿದರು.

ಸುಮಾರು 5,000 ಆರ್ಕಿಡ್‌ ಸಸ್ಯಗಳು, 1,000 ಅಂಥೋರಿಯಂ, ಸುಮಾರು 500 ಅಡೇನಿಯಮ್‌ ಸಸ್ಯಗಳನ್ನು ಪ್ರದರ್ಶನ, ಮಾರಾಟ ಮಾಡಲಾಗುವುದು. ನವಿಲಿನ ಬಣ್ಣಗಳನ್ನು ಪ್ರದರ್ಶಿಸಲಾಗುವುದು, 1,200ಕ್ಕೂ ಹೆಚ್ಚು ಆರ್ಕಿಡ್‌ ಹೂವಿನ ಕಾಂಡಗಳನ್ನು ಬಳಸಿ ಅಲಂಕರಿಸಲಾಗುವುದು. ಪ್ರತಿ ಸಂಜೆ ಲಕ್ಕಿ ಡ್ರಾ ನಡೆಯಲಿದ್ದು, ಓರ್ವರು ಆಕೀìಡ್‌ ಗಿಡವನ್ನು ಬಹುಮಾನವಾಗಿ ಪಡೆಯಲಿದ್ದಾರೆ ಎಂದರು. ಸಂತ ಅಲೋಶಿಯಸ್‌ ಕಾಲೇಜಿನ ಡಾ| ಶಶಿಕಿರಣ್‌, ಸಂಶೋಧನಾ ವಿದ್ಯಾರ್ಥಿಗಳಾದ ಸಚಿನ್‌ ಪಟವರ್ಧನ್‌, ಸುಲಕ್ಷಣಾ ಕರ್ಕೇರಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next