Advertisement

ಅಪ್ಪು ನಮನ; ಕಲಾವಿದರ ಕೈಚಳಕದಲ್ಲಿ ಮೂಡಿದ ಅಪ್ಪು

06:07 PM Oct 29, 2022 | Team Udayavani |

ಬೆಂಗಳೂರು: ಪುನೀತ್‌ ರಾಜಕುಮಾರ್‌ ಸ್ಮರಣಾರ್ಥ ಅನೇಕ ಕಲಾವಿದರು ತಮ್ಮ ಕಲಾಸ್ಪರ್ಶದ ಮೂಲಕ ತಮ್ಮದೇ ಆದ ರೀತಿಯಲ್ಲಿ ಪುನೀತ್‌ ಅವರನ್ನು ಸ್ಮರಿಸುತ್ತಿದ್ದಾರೆ. ಕೊಬ್ಬರಿ, ತೆಂಗಿನಕಾಯಿ, ಕಲ್ಲಂಗಡಿ ಹಣ್ಣು, ತೈಲವರ್ಣ, ಬೆಣ್ಣೆ, ಅಕ್ಷರಮಾಲೆ, ಮೇಣದಬತ್ತಿ, ಸೀಮೆಸುಣ್ಣ ಹೀಗೆ ಅನೇಕ ವಸ್ತುಗಳಲ್ಲಿ ಕಲಾವಿದರು ಪುನೀತ್‌ ಅವರ ಭಾವಚಿತ್ರವನ್ನು ಅರಳಿಸಿದ್ದಾರೆ.

Advertisement

ಇದನ್ನೂ ಓದಿ:ವ್ಯಾನ್‌ನನ್ನೇ ಮನೆ ಮಾಡಿಕೊಂಡು ದೇಶ–ವಿದೇಶ ಸುತ್ತುವ ದಂಪತಿ:ಇವರದ್ದು ಅದ್ಭುತ ಅನುಭವದ ಯಾತ್ರೆ

ಕಲಾವಿದ ಸೇಂದಿಲ್‌ ಕುಮಾರ್‌ 46 ಕಲ್ಲಂಗಡಿ ಹಣ್ಣುಗಳಲ್ಲಿ ಪುನೀತ್‌ ರಾಜಕುಮಾರ್‌ ಅವರ ವಿವಿಧ ಭಂಗಿಯ ಭಾವಚಿತ್ರಗಳನ್ನು ಮೂಡಿಸಿದರೆ, ಬೆಂಗಳೂರಿನ ಚೆನ್ನೈಸ್‌ನ ಅಮೃತಕಲಾ ಸಂಸ್ಥೆಯ ಕಲಾವಿದರು 46 ಕೆ.ಜಿ ತೂಕದ ಬೆಣ್ಣೆಯಲ್ಲಿ ಪುನೀತ್‌ ರಾಜಕುಮಾರ್‌ ಅವರ ಪುತ್ಥಳಿಯನ್ನು ನಿರ್ಮಿಸಿದ್ದಾರೆ.

ಇದಲ್ಲದೆ ಅನೇಕ ಕಲಾವಿದರು ತೈಲವರ್ಣದಲ್ಲಿ ಪುನೀತ್‌ ಭಾವಚಿತ್ರ ಮೂಡಿಸಿದರೆ, ಇನ್ನು ಕೆಲವು ಕಲಾವಿದರು ಮೇಣದಬತ್ತಿ, ಸೀಮೆಸುಣ್ಣದಲ್ಲೂ ಪುನೀತ್‌ ಅವರ ಪುತ್ಥಳಿ ನಿರ್ಮಿಸಿದ್ದಾರೆ. ಇದಲ್ಲದೆ ಪುನೀತ್‌ ಅವರ ಸ್ಮರಣೆಯ ಸಲುವಾಗಿ ವಿಶೇಷ ರುದ್ರಾಕ್ಷಿ ಮಾಲೆ, ಮಂಡಕ್ಕಿ ಹಾರ, ವಿಶೇಷ ವಿನ್ಯಾಸದ ಶಾಲುಗಳನ್ನೂ ಅಭಿಮಾನಿಗಳು ರಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next