Advertisement

ತುಮಕೂರು : ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ ಅಪ್ಪು ಅಭಿಮಾನಿ

09:23 AM Nov 03, 2021 | Team Udayavani |

ತುಮಕೂರು : ತಾಲೂಕಿನ ಹೆಬ್ಬೂರು ಹೋಬಳಿ ಕೋಡಿಪಾಳ್ಯ ಗ್ರಾಮದ ಅಪ್ಪು ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ನಟ ಪುನೀತ್ ರಾಜ್‌ಕುಮಾರ್ ಅಭಿಮಾನಿ ಭರತ್ (30) ಡೆತ್ ನೋಟ್ ಬರೆದಿದ್ದು, ನೇಣು ಹಾಕಿಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್ ನೋಟ್ ನಲ್ಲಿ, ನನ್ನ ಸಾವಿಗೆ ನಾನೇ ಕಾರಣ. ಪುನೀತ್ ಅಭಿಮಾನಿಯಾಗಿದ್ದು, ಅವರ ಸಾವನ್ನು ನೋಡಲಾಗುತ್ತಿಲ್ಲ. ಪುನೀತ್ ಹೋದ ಜಾಗಕ್ಕೆ ನಾನು ಹೋಗುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಇನ್ನು ಭರತ್ ಕುಟುಂಬಸ್ಥರು ಆತನ ಎರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಭರತ್ ಗಾರೆ ಕೆಲಸ ಮಾಡಿಕೊಂಡಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ಸಂಬಂಧ ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next