Advertisement

ಇ-ಖಾತೆ ಕಲ್ಪಿಸುವ ವಿಧೇಯಕಕ್ಕೆ ಅನುಮೋದನೆ

09:18 PM Sep 20, 2022 | Team Udayavani |

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ 2006ರ ನಗರ ಮತ್ತು ಪಟ್ಟಣ ಯೋಜನಾ ಪ್ರಾಧಿಕಾರ ರಚನೆಗೂ ಮುಂಚೆ ನಿರ್ಮಾಣಗೊಂಡ ಬಡಾವಣೆ ಹಾಗೂ ನಿವೇಶನಗಳಿಗೆ ಇ ಖಾತೆ ಸುಗಮವಾಗಿ ಲಭ್ಯವಾಗುವಂತೆ ಅವಕಾಶ ಮಾಡಿಕೊಡುವ ಕರ್ನಾಟಕ ಮುನ್ಸಿಪಾಲಿಟಿಗಳ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.

Advertisement

ಈ ವಿಚಾರದಲ್ಲಿ ಯು.ಟಿ. ಖಾದರ್‌ ಹಾಗೂ ಕರಾವಳಿ ಭಾಗದ ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಸಚಿವ ಎಂ.ಟಿ.ಬಿ. ನಾಗರಾಜ್‌ ವಿಧೇಯಕದ ಉದ್ದೇಶ ವಿವರಿಸಿದರು. ಅಂತಿಮವಾಗಿ ಅನುಮೋದನೆ ನೀಡಲಾಯಿತು.

ಐದು ವಿಧೇಯಕ ಅನುಮೋದನೆ:

ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದ್ದ ಬಿಬಿಎಂಪಿ ತಿದ್ದುಪಡಿ ವಿಧೇಯಕ, ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ತಿದ್ದುಪಡಿ ವಿಧೆಯಕ ಹಾಗೂ ಕರ್ನಾಟಕ ಭೂ ಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕ, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ, ರೇಷ್ಮೆ ಹುಳು ಬಿತ್ತನೆ ರೇಷ್ಮೆಗೂಡು ಮತ್ತು ರೇಷ್ಮೆ ನೂಲು ತಿದ್ದುಪಡಿ ವಿಧೇಯಕ ಮಂಡಿಸಿ ಅನುಮೋದನೆ ಪಡೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next