Advertisement

ಪಿಎಚ್‌ಡಿ ನಿಯಮಾವಳಿ ತಿದ್ದುಪಡಿಗೆ ಅನುಮೋದನೆ

05:43 PM Sep 24, 2022 | Team Udayavani |

ಮೈಸೂರು: ಮೈಸೂರು ವಿಶ್ವವಿದ್ಯಾನಿ ಲಯದ ಪಿಎಚ್‌.ಡಿ ನಿಯಮಾವಳಿಗಳು 2022ಕ್ಕೆ ಶುಕ್ರವಾರ ಇಲ್ಲಿ ನಡೆದ ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿಯ ಎರಡನೇ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

Advertisement

ಪಿಎಚ್‌.ಡಿ ಮುಗಿಸಲು 5 ವರ್ಷಗಳು ಪ್ಲಸ್‌ 2 ವರ್ಷಗಳ ಅವಕಾಶ ಈವರೆಗೆ ಇತ್ತು. ಇದನ್ನು ಆರು ಪ್ಲಸ್‌ ಒಂದು ವರ್ಷಕ್ಕೆ ಮಾರ್ಪಾಡು ಮಾಡಲಾಗಿದೆ. ಅಭ್ಯರ್ಥಿ ಐದು ವರ್ಷದಲ್ಲಿ ಪಿಎಚ್‌.ಡಿ ಮುಗಿಸದಿದ್ದರೆ ಅವಧಿ ವಿಸ್ತರಣೆಗೆ ಸರಾಸರಿ 30 ಸಾವಿರ ರೂ. ಶುಲ್ಕ ಪಾವ ತಿಸಬೇಕಿತ್ತು. ಈಗ ಆರು ವರ್ಷಗಳವರೆಗೆ ಅವಕಾಶ ನೀಡಲಾಗುವುದು. ಈ ಅವಧಿಯಲ್ಲಿ ಪಿಎಚ್‌.ಡಿ ಮುಗಿಸದಿ ದ್ದರೆ ವಿಸ್ತರಣೆಗೆ ನಿಗದಿತ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ಅಧ್ಯಕ್ಷತೆಯಲ್ಲಿ ಮಾನಸಗಂಗೋತ್ರಿಯ ಲಲಿತ ಕಲಾ ಕಾಲೇಜಿನ ಸಭಾಂಗಣದಲ್ಲಿ ನಡೆದ ಶಿಕ್ಷಣ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಹೊಸ ನಿಯಮಾವಳಿಗಳಿಗೆ ಅ.12 ರಂದು ನಡೆಯುವ ಸಿಂಡಿಕೇಟ್‌ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು. ಹೊಸ ನಿಯಮ 2022-23ನೇ ಸಾಲಿನಿಂದಲೇ ಅನುಷ್ಠಾ ನಗೊಳ್ಳಲಿದೆ. ಪಿಎಚ್‌.ಡಿ ಮಾರ್ಗದರ್ಶಕರು ಪ್ರಾಧ್ಯಾಪಕರಾಗಿದ್ದರೆ ಗರಿಷ್ಠ 12 ಮಂದಿಗೆ ಗೈಡ್‌ ಮಾಡಬಹುದು. ಪಿಎಚ್‌.ಡಿ ಪದವಿಗೆ ಪ್ರವೇಶ ಪರೀಕ್ಷೆಯಲ್ಲೂ ಬದಲಾವಣೆ ಆಗಿದೆ. ಈ ಹಿಂದೆ ನೂರು ಅಂಕಗಳಲ್ಲಿ 50 ಅಂಕಗಳ ಪ್ರಶ್ನೆಗಳಿಗೆ ವಿವರಣಾತ್ಮಕ ಉತ್ತರ ಮತ್ತು 50 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳಿದ್ದವು. ಈಗಿನ ತಿದ್ದುಪಡಿ ನಿಯಮಗಳಲ್ಲಿ 100 ಅಂಕಗಳಿಗೂ ಬಹು ಆಯ್ಕೆಯ ಪ್ರಶ್ನೆಗಳೇ ಇರಲಿದೆ.

ಪಿಎಚ್‌.ಡಿ ಕೋರ್ಸ್‌ ವರ್ಕ್‌ ಅವಧಿ 20 ವಾರಗಳಿದ್ದವು. ಈಗ ಇದನ್ನು 16 ವಾರಗಳಿಗೆ ಇಳಿಸಲಾಗಿದೆ. ಈ ಬಾರಿ ರಿಸರ್ಚ್‌ ಆ್ಯಂಡ್‌ ಪಬ್ಲಿಕೇಷನ್‌ ಎಥಿಕ್ಸ್‌ ಕೋರ್ಸ್‌ ಅನ್ನು ಹೊಸದಾಗಿ ಅಳವಡಿಸಲಾಗಿದೆ. ಕುಲಸಚಿವ ಆರ್‌.ಶಿವಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next