Advertisement

28 ಸ್ಥಳಗಳಲ್ಲಿ ಮರಳುಗಾರಿಕೆಗೆ ಅನುಮೋದನೆ

08:05 AM Aug 15, 2017 | Team Udayavani |

ಉಡುಪಿ: ಕರ್ನಾಟಕ ಕರಾವಳಿ ವಲಯ ನಿರ್ವಹಣಾ ಸಮಿತಿ ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ನೀಡಿದ 28 ಸ್ಥಳಗಳಲ್ಲಿ ಮರಳುಗಾರಿಕೆ ನಡೆಸಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಸಮಿತಿ ಅನುಮೋದನೆ ನೀಡಿದೆ. 

Advertisement

ರಾಜ್ಯ ಸಮಿತಿಯು ನೀಡಿದ ನಿಬಂಧನೆ ಗಳು, ಒಪ್ಪಂದ ಪತ್ರದ ಮಾರ್ಗಸೂಚಿಗಳನ್ನು ಪರಿಶೀಲಿಸಿದ ಸಮಿತಿಯು ಈಗಾಗಲೇ ಮರಳುಗಾರಿಕೆ ನಡೆಸಲು ನೋಂದಣಿಯಾದ 173 ಅರ್ಜಿದಾರರಲ್ಲಿ ಆಯ್ಕೆ ಮಾಡಲು ಚಿಂತನೆ ನಡೆಸಿತು. ಇವರ ಕುರಿತು ತಹಶೀಲ್ದಾರರಿಂದ ವರದಿ ತರಿಸಿಕೊಂಡ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಮುಂದೆ ಪರಿಶೀಲನೆ ನಡೆಸಲಿದೆ. ಇನ್ನೆರಡು ದಿನಗಳಲ್ಲಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲು ಸಭೆ ನಿರ್ಧರಿಸಿತು. ಇದುವರೆಗೆ ಅರ್ಜಿ ಸಲ್ಲಿಸದವರು ಅರ್ಜಿ ಸಲ್ಲಿಸಬಹುದು. ಸ್ಥಳೀಯ ಜನರಿಗೆ ಮರಳುಗಾರಿಕೆ ನಡೆಸಲು ಮತ್ತು ಹೊರಜಿಲ್ಲೆಗೆ ರವಾನೆಯಾಗದೆ ಸ್ಥಳೀಯವಾಗಿ ಬಳಸಲು ಸಭೆ ನಿರ್ಧರಿಸಿತು. 

ಸುಮಾರು ಒಂದು ವಾರದಲ್ಲಿ ಮರಳುಗಾರಿಕೆ ಆರಂಭವಾಗಿ ಮರಳು ಜನರಿಗೆ ದೊರಕಬಹುದು ಎಂದು ಅಂದಾಜಿಸಲಾಗಿದೆ. ಸಭೆಯಲ್ಲಿ ಸಹಾಯಕ ಕಮಿಷನರ್‌ ಶಿಲ್ಪಾ ನಾಗ್‌, ಎಸ್ಪಿ ಡಾ| ಸಂಜೀವ ಪಾಟೀಲ್‌, ಸಿಆರ್‌ಝಡ್‌ ಅಧಿಕಾರಿ ವಿಜಯ ಕುಮಾರ್‌, ಪರಿಸರ ಅಧಿಕಾರಿ ಲಕ್ಷ್ಮೀಕಾಂತ್‌, ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ಕೋದಂಡರಾಮಯ್ಯ ಮೊದಲಾ ದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next