Advertisement

ವಿಧಾನ-ಕದನ 2023: ಪ್ರಚಾರಕ್ಕೆ ಎಲ್ಲಿದೆ ದಿನಾಂಕದ ಭಾರ

12:22 AM Mar 27, 2023 | Team Udayavani |

ಮಂಗಳೂರು: ಚುನಾವಣೆ ದಿನಾಂಕ ಘೋಷಣೆಯಾಗಲು ಕೆಲವು ದಿನಗಳು ಬಾಕಿ ಇವೆ. ಆದರೆ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆಗೆ ಈಗಾಗಲೇ ಹುರುಪು ಬಂದಿದೆ.

Advertisement

ಮತದಾರರ ಮನವೊಲಿಸಿಕೊಳ್ಳಲು ನಾನಾ ತಂತ್ರಗಳು ಹಾಗೂ ಆಲೋಚನೆಗಳನ್ನು ಪಕ್ಷಗಳ ನಾಯಕರು ಜಾರಿಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲಿ ಮತದಾರರನ್ನು ಹಣ, ಆಸೆ ಆಮಿಷಗಳ ಮೂಲಕ ಕೊಳ್ಳುವುದು ಕಷ್ಟ ಎಂದು ಅರಿತಿ ರುವ ಪಕ್ಷಗಳು, ವಿಭಿನ್ನ ಪ್ರಯೋಗಗಳನ್ನು ಕೈಗೊಳ್ಳುತ್ತಾ ಜನರನ್ನು ತಲುಪುತ್ತಿದ್ದಾರೆ.

ಚುನಾವಣೆ ದಿನಾಂಕ ಘೋಷಣೆಯಾದ ಕೂಡಲೇ ನೀತಿ ಸಂಹಿತೆ ಜಾರಿಗೊಳ್ಳಲಿದೆ. ಆಗ ಚುನಾವಣ ಆಯೋಗವು ಪಕ್ಷಗಳ ಕಾರ್ಯಕ್ರಮಗಳು, ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ನಿಗಾ ಇಡಲಿದೆ. ಹಾಗಾಗಿ ಪಕ್ಷಗಳು ಜನರನ್ನು ತಲುಪುವ ಕಾರ್ಯವನ್ನು ಈಗಲೇ ಮಾಡುತ್ತಿವೆ.

ಜಿಲ್ಲಾ ಮಟ್ಟದಲ್ಲಿ ಆಡಳಿತ ಪಕ್ಷದ ನಾಯಕರು ಅಲ್ಲಲ್ಲಿ ಒಬಿಸಿ ಸಮಾವೇಶ, ಯುವ ಸಮಾವೇಶ, ಎಸ್‌ಸಿ ಸಮಾವೇಶ ಗಳನ್ನು ಸಂಘಟಿಸಿದರೆ, ವಿಪಕ್ಷವೂ ಗ್ಯಾರಂಟಿ ಕಾರ್ಡ್‌ನ ಪ್ರಚಾರದ ಜತೆಗೆ ಯಾತ್ರೆ, ಸಭೆ- ಸಮಾವೇಶಗಳಿಗೆ ಮೊರೆ ಹೋಗುತ್ತಿದೆ. ಶಿಲಾನ್ಯಾಸ ಕಾರ್ಯಕ್ರಮಗಳು, ಉದ್ಘಾಟನ ಸಮಾರಂಭಗಳೂ ಆಡಳಿತ ಪಕ್ಷದ ವತಿ ಯಿಂದ ಭರ್ಜರಿಯಾಗಿ ನಡೆಯುತ್ತಿದೆ.

ಪಕ್ಷಗಳ ಧ್ವಜಗಳನ್ನು ಹಾಕಿಕೊಂಡು, ನಾಯಕರ ಆಳೆತ್ತರ ಫೋಟೋಗಳೊಂದಿಗೆ ಕೆಲವೆಡೆ ಯಕ್ಷಗಾನ, ನಾಟಕ ಪ್ರದರ್ಶನ ದಂತಹ ಕಾರ್ಯಕ್ರಮಗಳನ್ನು ನಡೆಸಲಾಗು ತ್ತಿದೆ. ಕಂಬಳ, ಧಾರ್ಮಿಕ ಕಾರ್ಯಗಳಿಗೆ ನಾ ಮುಂದು ತಾ ಮುಂದು ಎಂಬಂತೆ ಅಲ್ಲಲ್ಲಿ ಪಕ್ಷಗಳ ನಾಯಕರಿಂದ ಬ್ಯಾನರ್‌, ಬಂಟಿಂಗ್ಸ್‌, ಫ್ಲೆಕ್ಸ್‌ಗಳ ಮೂಲಕ ಶುಭ ಕೋರುವ ಕಾರ್ಯವೂ ಎಗ್ಗಿಲ್ಲದೆ ಸಾಗಿದೆ. ಚುನಾವಣ ಆಯೋಗವು ಈಗಾಗಲೇ ಮತದಾರರಿಗೆ ಆಮಿಷ ಒಡ್ಡುವ ರೀತಿಯ ಕಾರ್ಯಕ್ರಮ, ಪ್ರಚಾರ ಪ್ರಕ್ರಿಯೆಗಳ ಬಗ್ಗೆ ನಿಗಾ ವಹಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದೆ. ಜಿಲ್ಲಾಧಿಕಾರಿಗಳೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಇದ್ಯಾವುದಕ್ಕೂ ಪಕ್ಷಗಳು ಗಮನ ಕೊಟ್ಟಂತಿಲ್ಲ.

Advertisement

ಪ್ರತಿನಿತ್ಯ ಎಂಬಂತೆ ನಗರದ ಅಲ್ಲಲ್ಲಿ ಪಕ್ಷಗಳ ವತಿಯಿಂದ ಡಿಜೆ ಸಂಗೀತದೊಂದಿಗೆ ರೋಡ್‌ ಶೋ ಮುಂದುವರಿದಿದೆ. ನಗರದಲ್ಲಿ ಒಂದೆಡೆ ಕಂದಾಯ ಅಧಿಕಾರಿಗಳು ಬ್ಯಾನರ್‌, ಫ್ಲೆಕ್ಸ್‌ಗಳನ್ನು ತೆರವುಗೊಳಿಸುತ್ತಿದ್ದರೆ, ಮತ್ತೆ ಅದೇ ಜಾಗದಲ್ಲಿ ಹೊಸ ಫ್ಲೆಕ್ಸ್‌ ಬ್ಯಾನರ್‌ಗಳು ಪಕ್ಷಗಳ ನಾಯಕರಿಗೆ ಶುಭ ಕೋರುತ್ತಿವೆ.
ಜಿಲ್ಲೆಯಲ್ಲಿ ಕೆಲವು ದಶಕಗಳಿಂದೀಚೆಗೆ ನಡೆ ದಿರುವ ಚುನಾವಣೆಗಳನ್ನು ಗಮನಿಸಿದರೆ, ಇಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆಯೇ ನೇರ ಸ್ಪರ್ಧೆ ಕಂಡು ಬರುತ್ತದೆ. ಉಳಿದಂತೆ ಇತರ ಪ್ರಮುಖ ಪಕ್ಷಗಳು, ಪಕ್ಷೇತರರು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ, ಸ್ಪರ್ಧೆಯನ್ನೂ ನೀಡುತ್ತಾರೆ. ಈ ಬಾರಿಯ ಚುನಾವಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಬಿಜೆಪಿಯೂ ಪಟ್ಟಿಯನ್ನು ಸಿದ್ಧಗೊಳಿಸುತ್ತಿದೆ. ಜಿಲ್ಲೆಯಲ್ಲಿ ಮೆಲ್ಲನೆ ತನ್ನ ಅಸ್ತಿತ್ವ ತೋರ್ಪಡಿಸಲು ಪ್ರಯತ್ನಿಸುತ್ತಿರುವ ಆಮ್‌ ಆದ್ಮಿ ಪಕ್ಷ ಈಗಾಗಲೇ ಜಿಲ್ಲೆಯ ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು, ಚುನಾವಣ ಪ್ರಚಾರ ಕಾರ್ಯವನ್ನು ಅಭ್ಯರ್ಥಿಗಳ ಹೆಸರಿನಿಂದಲೇ ಆರಂಭಿಸಿದೆ.

ರಾಜಕೀಯ ಪಕ್ಷಗಳ ಈ ಚುನಾವಣ ಘೋಷಣಾ ಪೂರ್ವ ಪ್ರಚಾರ ಪೈಪೋಟಿ ಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಜಿಲ್ಲೆಯ ಮತದಾರರ ನಡೆ ಮಾತ್ರ ಚುನಾ ವಣೆ ಘೋಷಣಾ ಪೂರ್ವದಲ್ಲೇ ಕುತೂ ಹಲವನ್ನು ಕೆರಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next