ಬೆಂಗಳೂರು: ಸುಲಿಗೆ ಪ್ರಕರಣದಲ್ಲಿ ಬಂಧಿಸಲು ಹೋದಾಗ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಬಾವಿಗೆ ಬಿದ್ದಿದ್ದ ಆರೋಪಿಯೊಬ್ಬನನ್ನು ಯಲಹಂಕ ಠಾಣೆಯ ಕಾನ್‌ಸ್ಟೇಬಲ್ ಶಿವಕುಮಾರ್ ಎಂಬುವರು ಪ್ರಾಣದ ಹಂಗು ತೊರೆದು ರಕ್ಷಿಸಿ ಕರ್ನಾಟಕ ಪೊಲೀಸ್ ಇಲಾಖೆಗೆ ಗೌರವ ಹೆಚ್ಚಿಸಿದ್ದಾರೆ.
ಗೋವಿಂದಪುರ ನಿವಾಸಿ ಇಮ್ರಾನ್ (34) ಹಾಗೂ ಇತರೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ 65 ಸಾವಿರ ರೂ. ಮೌಲ್ಯದ ಒಂದು ಚಿನ್ನದ ಸರ, ಮೊಬೈಲ್ ಫೋನ್, ಎರಡು ವಾಹನಗಳು ವಶಕ್ಕೆ ಪಡೆಯಲಾಗಿದೆ. ಅ.3ರಂದು ಮಾರುತಿನಗರದ ರೆಡ್ಡಿ ಶೇಖರ್ ಎಂಬುವರನ್ನು ಅಡ್ಡಗಟ್ಟಿದ್ದ ಆರೋಪಿಗಳು ಚಿನ್ನದ ಸರ, ಮೊಬೈಲ್ ಫೋನ್ ಮತ್ತು 3 ಸಾವಿರ ರೂ. ಸುಲಿಗೆ ಮಾಡಿ ಪರಾರಿಯಾಗಿದ್ದರು.
ಪ್ರಕರಣದ ತನಿಖೆ ಕೈಗೊಂಡ ಯಲಹಂಕ ಪೊಲೀಸರು, ಘಟನಾ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಗೋವಿಂದ ಪುರ ಮೂಲದ ಆರೋಪಿಗಳು ಎಂದು ಗೊತ್ತಾಗಿತ್ತು. ಅನಂತರ ಆರೋಪಿಗಳ ಬೆನ್ನು ಹತ್ತಿದ್ದಾಗ ಅವರು ತಮಿಳು ನಾಡಿನ ಧರ್ಮಪುರಿ ಕಡೆಗೆ ಹೋಗಿರುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ಯಲಹಂಕ ಠಾಣೆಯ ಪಿಎಸ್‌ಐ ಸುನೀಲ್ ಕುಮಾರ್, ಹರೀಶ್ ಮತ್ತು ಕಾನ್‌ಸ್ಟೇಬಲ್ ಶಿವಕುಮಾರ್ ಹಾಗೂ ಇತರರು ಹೋಗಿದ್ದರು. ಆಗ ಸ್ಥಳೀಯ ಪೊಲೀಸರ ಜತೆ ಸೇರಿ ಕಾರ್ಯಾಚರಣೆ ನಡೆಸಿದಾಗ ಸಮೀಪದ ಪೂಜಾ ಮಂದಿರದಲ್ಲಿ ಇಬ್ಬರು ಆರೋಪಿಗಳ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಹೋಗಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, ಆರೋಪಿ ಇಮ್ರಾನ್ ಮದ್ಯದ ಅಮಲಿನಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಸಮೀ ಪದ ಬಾವಿಗೆ ಬಿದ್ದು ಒದ್ದಾಡುತ್ತಿದ್ದ.
ಇದನ್ನೂ ಓದಿ;- ದೇಶದ ದೊಡ್ಡ ಜೋಕರ್ ರಾಹುಲ್ ಗಾಂಧಿ
ಪೊಲೀಸರ ಗೌರವ ಹೆಚ್ಚಿಸಿದ ಕಾನ್‌ಸ್ಟೇಬಲ್: ಈ ಮಧ್ಯೆ ಜೋರಾಗಿ ಸುರಿಯುತ್ತಿದ್ದ ಮಳೆ ನಡುವೆಯೂ ತನಿಖಾ ತಂಡ ದಲ್ಲಿದ್ದ ಕಾನ್‌ಸ್ಟೇಬಲ್ ಶಿವಕುಮಾರ್, ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದು ಆರೋಪಿಯನ್ನು ಮೇಲಕ್ಕೆತ್ತಿ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಧರ್ಮಪುರಿ ಆಸ್ಪತ್ರೆಯಲ್ಲಿ ಆರೋ ಪಿಗೆ ಚಿಕಿತ್ಸೆ ಕೊಡಿಸಿ ವಶಕ್ಕೆ ಪಡೆದು ಮೂವರು ಆರೋಪಿಗಳನ್ನು ನಗರಕ್ಕೆ ಕರೆ ತರಲಾಗಿದೆ. ಇನ್ನೊಬ್ಬ ಆರೋಪಿಯನ್ನು ದೇವನಹಳ್ಳಿ ಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ವೇಳೆ ಆರೋಪಿ ಬಾವಿಯಲ್ಲಿಯೇ ಮೃತಪಟ್ಟಿದ್ದರೆ ಕರ್ನಾಟಕ ಪೊಲೀಸರ ಕಾರ್ಯದಕ್ಷತೆ ಹಾಗೂ ಕಾರ್ಯಾಚರಣೆ ಬಗ್ಗೆ ಅಪಸ್ಪರ ಕೇಳಿಬರುತ್ತಿತ್ತು. ಆದರೆ, ಕಾನ್‌ಸ್ಟೇಬಲ್ ಶಿವಕುಮಾರ್ ಅವರ ಧೈರ್ಯದಿಂದ ಇಲಾಖೆಯ ಗೌರವ ಹೆಚ್ಚಾಗಿದೆ ಎಂದು ಹಿರಿಯ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಚಾರ ಪೊಲೀಸರಿಗೆ ಬಹುಮಾನ ವಿತರಣೆ ಬೆಂಗಳೂರು: ಸಿಟಿ ಮ್ಯಾನೇಜರ್ ಅಸೋಸಿಯೇಷನ್, ಕರ್ನಾಟಕ ಪೌರಾಡಳಿತ ನಿರ್ದೇಶನಾಲಯ ಸಹಯೋಗದಿಂದ ವಿವಿಧ ಸರ್ಕಾರಿ ಸಂಸ್ಥೆಗಳ ಉತ್ತಮ ಪದ್ಧತಿಗಳ ದಾಖಲೀಕರಣ ಮಾಡುವ ಉದ್ದೇಶದಿಂದ ನಡೆಸಿದ ಸ್ಪರ್ಧೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗದಿಂದ ಮಕ್ಕಳಿಗಾಗಿ ನಿರ್ಮಿಸಿರುವ “ಪೊಲೀಸ್ ಟ್ರಾμಕ್ ಪಾರ್ಕ್’ ಬಹುಮಾನಕ್ಕೆ ಭಾಜನವಾಗಿದೆ.
ಸೋಮವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು, ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವ ಎನ್. ನಾಗರಾಜು ಅವರು ಪೂರ್ವ ಸಂಚಾರ ಉಪ ಪೊಲೀಸ್ ಆಯುಕ್ತ ಕೆ.ಎಂ. ಶಾಂತರಾಜು, ಇನ್ಸ್‌ಪೆಕ್ಟರ್‌ಗಳಾದ ಡಾ. ಪಿ.ಜಿ. ಅನಿಲ್‌ಕುಮಾರ್, ಪಿ.ಎನ್. ಈಶ್ವರಿ ಅವರಿಗೆ ಬಹುಮಾನ ವಿತರಿಸಿದರು. ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ಸಂಚಾರ ಪೊಲೀಸ್‌ವತಿಯಿಂದ ಮಕ್ಕಳಿಗೆ ಕಲಿ-ನಲಿ-ತಿಳಿ ಎಂಬ ಮೂಲ ಮಂತ್ರವನ್ನು ಗಮನದಲ್ಲಿಟ್ಟುಕೊಂಡು “ಪೊಲೀಸ್ ಟ್ರಾಫಿಕ್ ಪಾರ್ಕ್’ ಅತ್ಯಂತ ಆಕರ್ಷಕವಾಗಿದ್ದು, ಮಕ್ಕಳಿಗೆ ಸುಗಮ ಸಂಚಾರದ ನಿಯಮಗಳನ್ನು ತಿಳಿಸುವ ತಾಣವಾಗಿದೆ. ಈ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಹೀಗಾಗಿ, ಈ ಪಾರ್ಕ್ ಬಹುಮಾನಕ್ಕೆ ಭಾಜನವಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.