Advertisement

ಬಂಡೀಪುರ ಹುಲಿ ಸಂರಕ್ಷಣೆಗೆ ಮೆಚ್ಚುಗೆ

10:54 PM Jul 31, 2021 | Team Udayavani |

ಹೊಸದಿಲ್ಲಿ: ಕರ್ನಾಟಕದ ಬಂಡೀಪುರ ಸೇರಿ ದೇಶದ 14 ಹುಲಿ ಅಭಯಾರಣ್ಯಗಳಲ್ಲಿ ವಿಶ್ವದರ್ಜೆಯ ನಿಯಮ ಗಳಂತೆ ಹುಲಿ ಸಂರಕ್ಷಣೆ ಮತ್ತು ನಿರ್ವಹಣೆ ನಡೆಸಲಾಗು ತ್ತಿದೆ. ಹೀಗಾಗಿ ಈ ರಕ್ಷಿತಾರಣ್ಯಗಳು “ಕನ್ಸರ್ವೇಷನ್‌ ಅಶ್ಯೂರ್ಡ್‌ ಟೈಗರ್‌ ಸ್ವ್ಯಾಂಡರ್ಡ್ಸ್’ (ಸಿಎಟಿಎಸ್‌) ನೀಡುವ ಮಾನ್ಯತೆಗೆ ಪಾತ್ರವಾಗಿವೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ತಿಳಿಸಿದೆ.

Advertisement

ಬಂಡೀಪುರವಲ್ಲದೆ, ತಮಿಳುನಾಡಿನ ಮಧುಮಲೆ ಮತ್ತು ಅಣ್ಣಾಮಲೆ, ಕೇರಳದ ಪರಂಬಿಕ್ಕುಳಂ, ಪಶ್ಚಿಮ ಬಂಗಾಲದ ಸುಂದರ್‌ಬನ್ಸ್‌, ಉತ್ತರ ಪ್ರದೇಶದ ದುಧ್ವಾ, ಬಿಹಾರದ ವಾಲ್ಮೀಕಿ, ಮಹಾರಾಷ್ಟ್ರದ ಪೆಂಚ್‌, ಮಧ್ಯಪ್ರದೇಶದ ಸಾತ್ಪುರಾ, ಕಾನ್ಹಾ ಮತ್ತು ಪನ್ನಾ, ಅಸ್ಸಾಂನ ಕಾಝಿರಂಗ, ಒರಾಂಗ್‌ ಮತ್ತು ಮನಾಸ್‌ ಹುಲಿ ಅಭಯಾರಣ್ಯಗಳಿಗೆ ಈ ಮಾನ್ಯತೆ ಸಿಕ್ಕಿದೆ.

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್‌ ಮಾತನಾಡಿ, ದೇಶದ ಎಲ್ಲ 51 ಹುಲಿ ಅಭಯಾರಣ್ಯಗಳು ಇಂಥ ಸಾಧನೆ ಮಾಡಬೇಕು. ಹುಲಿ ಗಳು ಅರಣ್ಯ ಮಾರ್ಗಗಳ ಮೂಲಕ ಇತರ ದೇಶಗಳ ಗಡಿ ದಾಟಿ ಪ್ರಯಾಣಿಸುತ್ತವೆ. ಅದನ್ನು ಉತ್ತೇಜಿಸಲು ನೆರೆಯ ರಾಷ್ಟ್ರಗಳ ಜತೆಗೆ ಮಾತುಕತೆ ನಡೆಸಬೇಕು ಎಂದಿದ್ದಾರೆ.

ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅವುಗಳ ರಕ್ಷಣೆಗೆ ಆದ್ಯತೆಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ವಿಶ್ವವಿಖ್ಯಾತ ಜೀವಶಾಸ್ತ್ರಜ್ಞ ಸಂಜಯ ಗುಬ್ಬಿ ಹೇಳಿದ್ದಾರೆ. ಜತೆಗೆ ಹುಲಿ ಅಭಯಾರಣ್ಯದ ಸುತ್ತಮುತ್ತ ವಾಸಿಸುತ್ತಿರುವ ಸ್ಥಳೀಯರನ್ನು ಒಲಿಸಿ ರಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಹುಲಿಗಳು ಸಂಚ ರಿಸುವ ಕಾರಿಡಾರ್‌ ಅನ್ನು ರಕ್ಷಿಸಬೇಕು. ಈ ಮೂಲಕ ಅವುಗಳು ಪ್ರತ್ಯೇಕ ವಾಗಿರುವಂತೆ ನೋಡಬಾರದು ಎಂದಿದ್ದಾ ರೆ.

ಯಾವೆಲ್ಲ ಅಂಶಗಳು? :

Advertisement

ಹುಲಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಅದರ ನಿರ್ವಹಣೆ, ಸ್ಥಳೀಯ ವ್ಯಕ್ತಿಗಳನ್ನು ಒಳಗೊಳ್ಳುವಂತೆ ಮಾಡುವುದು, ಪ್ರವಾಸೋದ್ಯಮ, ಅವುಗಳ ಆವಾಸಸ್ಥಾನ ರಕ್ಷಣೆಯನ್ನು “ಈ ಮಾನ್ಯತೆಗೆ’ ಪ್ರಧಾನವಾಗಿ ಪರಿಗಣಿಸಲಾಗುತ್ತದೆ.

ಸಿಎಟಿಎಸ್‌ ಎಂದರೇನು? :

ಜಗತ್ತಿನಲ್ಲಿ ಹುಲಿ ಅಭಯಾ ರಣ್ಯದ ನಿರ್ವಹಣೆ ಹೇಗೆ ಇರಬೇಕು ಎಂಬುದನ್ನು ನಿರ್ದೇ ಶಿಸುವ ಸಂಸ್ಥೆ. ಕನ್ಸರ್ವೇಷನ್‌ ಅಶ್ಯೂರ್ಡ್‌ ಟೈಗರ್‌ ಸ್ವ್ಯಾಂಡರ್ಡ್ಸ್ (ಸಿಎಟಿಎಸ್‌) ಎಂಬ ಹೆಸರಿನ ಈ ಒಕ್ಕೂಟ ಶುರುವಾದದ್ದು 2013ರಲ್ಲಿ ಜಗತ್ತಿನ ಏಳು ರಾಷ್ಟ್ರಗಳಲ್ಲಿರುವ 125 ಹುಲಿ ಅಭಯಾರಣ್ಯ ಗಳಲ್ಲಿ ಒಕ್ಕೂಟದ ನಿಯಮ ಪಾಲನೆ. ಪ್ರಸಕ್ತ ವರ್ಷ 20 ಹುಲಿ ಅಭಯಾರಣ್ಯ ಇದರ ವ್ಯಾಪ್ತಿಗೆ ಸೇರ್ಪಡೆ.

Advertisement

Udayavani is now on Telegram. Click here to join our channel and stay updated with the latest news.

Next