Advertisement

Kannada Cinema; ‘ಚಿ.ತು ಯುವಕರ ಸಂಘ’ ಟೀಸರ್ ಗೆ ಮೆಚ್ಚುಗೆ

02:15 PM Nov 06, 2023 | Team Udayavani |

“ಚಿ.ತು ಯುವಕರ ಸಂಘ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ, ಬಿಡುಗಡೆ ಹಂತಕ್ಕೆ ಬಂದಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿ.ತು ಯುವಕರ ಸಂಘ ಚಿತ್ರವನ್ನ ಶಿವು ರಾಮನಗರ ನಿರ್ದೇಶನ ಮಾಡಿದ್ದು, ಚೇತನ್‌ ರಾಜ್‌ ನಿರ್ಮಾಣ ಮಾಡಿದ್ದಾರೆ.

Advertisement

ಕಿರಣ್‌ ತೋಟಂಬೈಲ್‌ ಸಂಗೀತ ಸಂಯೋಜಿಸಿದ್ದಾರೆ. ಚಿ. ತು ಯುವಕರ ಸಂಘಕ್ಕೆ ನಾಯಕನಾಗಿ ಸನತ್‌ ಕಾಣಿಸಿಕೊಂಡಿದ್ದು, ವರ್ಣಿಕಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ತುಕಾಲಿ ಸಂತು, ಮಹಾಂತೇಶ್‌, ಬಲರಾಜ ವಾಡಿ, ಬಿರಾದಾರ್‌ ಸೇರಿದಂತೆ ದೊಡ್ಡ ಪ್ರತಿಭಾವಂತ ತಾರಾಬಳಗ ಈ ಚಿತ್ರದಲ್ಲಿದೆ. ಟೀಸರ್‌ನಲ್ಲಿ ಈ ಎಲ್ಲಾ ಪಾತ್ರಧಾರಿಗಳನ್ನು ನಿರ್ದೇಶಕ ಜೋಗಿ ಪ್ರೇಮ್‌ ಪರಿಚಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next