Advertisement

ಬಳೆ ಕುಟುಂಬದ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ

02:59 PM Nov 22, 2021 | Team Udayavani |

ದೇವದುರ್ಗ: ಮದುವೆ ಮಾಡುವುದು, ಮನೆ ಕಟ್ಟುವುದು ಬಡವರ ಪಾಲಿಗೆ ಕಷ್ಟವೇ ಸರಿ. ಮಠ-ಮಾನ್ಯಗಳು ಮಾಡಬೇಕಾದಂತಹ ಸಾಮೂಹಿಕ ವಿವಾಹಗಳು ಬಳೆ ಕುಟುಂಬದವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ತಾಲೂಕಿನ ಮಸರಕಲ್‌ ಗ್ರಾಮದ ಹೊರವಲಯದ ಮರಸಿಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿರುಪಾಕ್ಷಪ್ಪ ಬಳೆ ಕುಟುಂಬದ ಮದುವೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂದೆ, ತಾಯಿ ಆಸ್ತಿಯಿಂದ ಮದುವೆ ಆಗುವ ಬದಲು ಸ್ವಂತ ಶಕ್ತಿ ಮೇಲೆ ದುಡಿದು ಮದುವೆ ಮಾಡಿಕೊಳ್ಳಬೇಕು. ವರದಕ್ಷಿಣೆ ಕಿರುಕುಳ ನೀಡದೇ, ಕಾನೂನು ವಿರುದ್ಧ ಹೋಗದೇ ಸ್ವಂತ ಬಲದಿಂದಲೇ ಬದುಕು ಕಟ್ಟಿಕೊಳ್ಳಲು ಮುಂದಾಗಿ. ಪ್ರತಿಯೊಬ್ಬರಲ್ಲೂ ಸಂಸ್ಕಾರ, ಸಮಾನತೆ, ಬೇಧಭಾವ ಮಾಡದೇ ಎಲ್ಲರನ್ನೂ ಒಂದೇ ಭಾವನೆಯಿಂದ ನೋಡುವ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಬಸವರಾಜ ಪಾಟೀಲ್‌ ಇಟಗಿ ಮಾತನಾಡಿ, ಸಾಮೂಹಿಕ ವಿವಾಹಗಳ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಲಾಗುತ್ತದೆ. ಇಂತಹ ಕಾರ್ಯಕ್ರಮ ಆಯೋಜಿಸುವುದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 70 ನವ ಜೋಡಿಗಳು ದಾಂಪತ್ಯ ಜೀವಕ್ಕೆ ಕಾಲಿಟ್ಟರು. ಇದೇ ಸಂದರ್ಭದಲ್ಲಿ ವೀರತಪಸ್ವಿ ವೀರಭದ್ರ ಶಿವಾಚಾರ್ಯರು, ಶುಂಭು ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ಬೂದಿಬಸವೇಶ್ವರ ಸ್ವಾಮಿಗಳು, ಮುರುಘೇಂದ್ರ ಸ್ವಾಮಿಗಳು, ಸೋಮಶೇಖರ ಸ್ವಾಮಿಗಳು, ಶಿವಣ್ಣತಾತಾ ಮುಂಡರಗಿ, ಸಾಂಬಯ್ಯಪ್ಪ ಜಾಗಟಗಲ್‌, ಲಿಂಗಯ್ಯ ಪಟ್ಟದ ಪೂಜಾರಿ ಮಸರಕಲ್‌, ಕರೆಮ್ಮ ಗೋಪಾಲಕೃಷ್ಣ, ಪುರಸಭೆ ಅಧ್ಯಕ್ಷ ಹನುಮಗೌಡ ಶಂಕರಬಂಡಿ, ವಿರುಪಾಕ್ಷಪ್ಪ ಬಳೆ, ಸುನಂದ ಬಳೆ, ಮಹಾಂತೇಶ ಅತ್ತನೂರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next