Advertisement

Soon ನಿಗಮ ಮಂಡಳಿಗಳಿಗೆ ಕಾರ್ಯಕರ್ತರ ನೇಮಕ: ಡಾ. ಶರಣಪ್ರಕಾಶ ಪಾಟೀಲ್

05:11 PM Jul 11, 2024 | Team Udayavani |

ಕಲಬುರಗಿ: ಶೀಘ್ರದಲ್ಲಿ ನಿಗಮ ಮಂಡಳಿಗೆ ಅಧ್ಯಕ್ಷರ ಹಾಗೂ ಸದಸ್ಯರನ್ನು ನೇಮಕ ಮಾಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ನಿಗಮ ಮಂಡಳಿ ನೇಮಕ ಸಮಿತಿಯ ಸದಸ್ಯರೂ ಆಗಿರುವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ಪ್ರಮುಖ ವಾಗಿ ಬಹುತೇಕ ನಿಗಮ ಮಂಡಳಿಗಳಿಗೆ ಸದಸ್ಯರೇ ನೇಮಕವಾಗಬೇಕಿದೆ. ಹೀಗಾಗಿ ಮಾಹಿತಿ ಎಲ್ಲ ಪಡೆದು ನೇಮಕ ಮಾಡಲಾಗುವುದು ಎಂದು ವಿವರಿಸಿದರು.‌

ನಿಗಮ ಮಂಡಳಿ ಗಳಿಗೆ ನೇಮಕದಲ್ಲಿ ಈಗ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

ನೀಟ್ ಪರೀಕ್ಷೆಯ ಅಕ್ರಮ ಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗಂಭಿರತೆ ಹೊಂದಿಲ್ಲ. ಇಂದಿನ ದಿನದವರೆಗೂ ಒಬ್ಬರ ವಿರುದ್ಧವೂ ಕ್ರಮ‌ಕೈಗೊಂಡಿಲ್ಲ. ಆರೋಪಿಗಳ ರಕ್ಷಣೆ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ.‌ಈ ಹಿಂದೆಯೂ ಅಕ್ರಮ‌ ನಡೆದಿದೆ ಎನ್ನಲಾಗುತ್ತಿದೆ. ಅದರ ಕುರಿತಾಗಿಯೂ ತನಿಖೆ ನಡೆಯಬೇಕು. ಒಟ್ಟಾರೆ ಪಾರದರ್ಶಕವಾಗಿ ಪರೀಕ್ಷೆ ನಡೆಯುವಂತಾಗಬೇಕೆಂದರು.

Advertisement

ನೀಟ್ ಪರೀಕ್ಷೆಯು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಮೇರೆಗೆ ಕೇಂದ್ರ ಸರ್ಕಾರದ ದಿಂದ ಶಾಸನಬದ್ದವಾಗಿ ಕಾರ್ಯರೂಪಕ್ಕೆ ಬಂದಿದೆ. ಹೀಗಾಗಿ ರಾಜ್ಯಗಳು ಹೊರಗುಳಿಯಲು ಅಷ್ಟು ಸುಲಭವಾಗಿ ಬರೋದಿಲ್ಲ. ವ್ಯಾಪಕ ಅಕ್ರಮಕ್ಕೆ ಸಂಬಂಧಿಸಿದಂತೆ ಅಂತೀಮ ವರದಿ ಅಧಾರದ ಎಲ್ಲವೂ ಅಡಗಿದೆ ಎಂದು ಸಚಿವ ಡಾ. ಪಾಟೀಲ ಹೇಳಿದರು.

ರಾಯಚೂರಲ್ಲಿ ಏಮ್ಸ್: ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ನವದೆಹಲಿಯಲ್ಲಿ ಭೇಟಿಯಾದ ಸಂದರ್ಭದಲ್ಲಿ ಮನವಿ ಸಲ್ಲಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದರು.

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮುಂದಿನ ವರ್ಷದಿಂದ ಕನಿಷ್ಠ ಒಂದು ಸಾವಿರ ಪಿಜಿ ಸೀಟುಗಳ ಹೆಚ್ಚಿಸುವ ನಿಟ್ಟಿನಲ್ಲಿ ವರದಿ ಕೇಳಲಾಗಿದೆ. ವರದಿ ಆಧಾರದ ಮೇಲೆ ಸರ್ಕಾರ ತನ್ನ ಮುಂದಿನ‌ ಹೆಜ್ಜೆ ಇಡಲಿದೆ ಎಂದರು.

ಮಲ್ಟಿ ಸ್ಕೀಲ್ ಡೆವಲಪ್ಮೆಂಟ್ ಕೇಂದ್ರ
ರಾಜ್ಯದ ಕಲಬುರಗಿ, ಮೈಸೂರಿನ ವರುಣಾ ಹಾಗೂ ಯಲಬುರ್ಗಾ ಕ್ಷೇತ್ರದ ತಳಕಲ್ ದಲ್ಲಿ ಮಲ್ಟಿ ಸ್ಕೀಲ್ ಡೆವಲಪ್ಮೆಂಟ್ ಕೇಂದ್ರಗಳನ್ನು 120 ಕೋ.ರೂ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಬಜೆಟ್ ಸಲ್ಲಿ ಘೋಷಣೆ ಮಾಡಿರುವಂತೆ ಬಳ್ಳಾರಿಯ ಲ್ಲಿ 200 ಕೋ.ರೂ ವೆಚ್ಚದಲ್ಲಿ ಮಲ್ಟಿ ಸ್ಕೀಲ್ ಪಾರ್ಕ್ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next