ಬೆಂಗಳೂರು: ರಾಜ್ಯ ವಿಧಾನ ಮಂಡಲದ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿ
ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರಾಗಿ ಪ್ರತಿಪಕ್ಷ ಬಿಜೆಪಿಯ ಮಾಜಿ ಡಿಸಿಎಂ ಆರ್.ಅಶೋಕ್ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಮಿತಿ ಅಧ್ಯಕ್ಷರಾಗಿ ಆಡಳಿತಾರೂಢ ಕಾಂಗ್ರೆಸ್‌ನ ಎಂ.ಬಿ.ಪಾಟೀಲ್ ನೇಮಕಗೊಂಡಿದ್ದಾರೆ.
ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ – ಎಚ್.ಕೆ.ಕುಮಾರಸ್ವಾಮಿ, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತ ಕಲ್ಯಾಣ ಸಮಿತಿ ಅಧ್ಯಕ್ಷ- ಎನ್.ಎ. ಹ್ಯಾರಿಸ್, ಅಧೀನ ಶಾಸನ ರಚನಾ ಸಮಿತಿ- ವಿ. ಮುನಿಯಪ್ಪ, ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ- ಕೆ.ಜಿ. ಬೋಪಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ- ಎಸ್.ಟಿ. ಸೋಮಶೇಖರ್, ಗ್ರಂಥಾಲಯ ಸಮಿತಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ-ಬಿ.ಕೆ. ಸಂಗಮೇಶ್, ಅಂದಾಜುಗಳ ಸಮಿತಿ -ಕೆ.ಶ್ರೀನಿವಾಸಗೌಡ, ಸರ್ಕಾರಿ ಭರವಸೆಗಳ ಸಮಿತಿ- ಎ.ಟಿ.ರಾಮಸ್ವಾಮಿ, ಹಕ್ಕುಭಾದ್ಯತೆಗಳ ಸಮಿತಿ- ಈಶ್ವರ್ ಖಂಡ್ರೆ, ಖಾಸಗಿ ಸದಸ್ಯರುಗಳ ಹಾಗೂ ನಿರ್ಣಯಗಳ ಸಮಿತಿ ಮತ್ತು ಅರ್ಜಿಗಳ ಸಮಿತಿ, ಹಾಗೂ ವಸತಿ ಸೌಕರ್ಯಗಳ ಸಮಿತಿ- ಉಪ ಸಭಾಧ್ಯಕ್ಷ ಎಂ. ಕೃಷ್ಣಾರೆಡ್ಡಿ ನೇಮಿಸಲಾಗಿದೆ. ವಿ.ಮಂಡಲದ 9 ಸ್ಥಾಯಿ ಸಮಿತಿಗೆ ಎರಡೂ ಸದನಗಳ ಶಾಸಕರು ಸದಸ್ಯರಾಗಿದ್ದು, ವಿಧಾನ ಸಭೆಯ 6 ಸಮಿತಿಗಳಿಗೆ ವಿಧಾನಸಭೆ ಶಾಸಕರು ಸದಸ್ಯರಾಗಿರುತ್ತಾರೆ.