Advertisement

ಕೆಪಿಸಿಸಿ ಅಧ್ಯಕ್ಷರ ನೇಮಕ: ಸೋನಿಯಾಗೆ ಅಧಿಕಾರ ಡಿಕೆಶಿ ಮುಂದುವರಿಕೆ?

12:06 AM Sep 17, 2022 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಚುನಾವಣೆ ವಿಷಯದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ಒಂದು ಸಾಲಿನ ನಿರ್ಣಯ ಅಂಗೀಕರಿಸಿದ್ದಾರೆ.

Advertisement

ಇತ್ತೀಚೆಗಷ್ಟೇ ಸೋನಿಯಾ ಗಾಂಧಿ ಯವರ ವಿವೇಚನೆಗೆ ಬಿಡುವ ಕುರಿತಂತೆ ನಿರ್ಣಯ ಕೈಗೊಂಡು ಕಳುಹಿಸುವಂತೆ ರಾಜ್ಯ ಘಟಕಗಳಿಗೆ ಎಐಸಿಸಿ ಕಡೆಯಿಂದ ಸೂಚನೆ ರವಾನೆಯಾಗಿತ್ತು. ಹೀಗಾಗಿ ಶುಕ್ರವಾರ ಸಭೆ ಸೇರಿದ್ದ ರಾಜ್ಯ ಕೆಪಿಸಿಸಿ, ಮುಂದಿನ ಅಧ್ಯಕ್ಷರ ಆಯ್ಕೆ ನಿರ್ಧಾರವನ್ನು ಸೋನಿಯಾ ಗಾಂಧಿಯವರಿಗೆ ಬಿಡಲು ನಿರ್ಣಯಿಸಿತು ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಬಹುತೇಕ ಡಿ.ಕೆ.ಶಿವಕುಮಾರ್‌ ಅವರೇ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಇದೆ. ಚುನಾವಣ ವರ್ಷ ಆಗಿರುವುದರಿಂದ ಬದಲಾವಣೆ ಇಲ್ಲ ಎಂದು ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next