ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲಾ ಮಟ್ಟದಲ್ಲಿ ಪಕ್ಷ ಬಲದವರ್ಧನೆಗೆ ಮುಂದಾಗಿರುವ ಕಾಂಗ್ರೆಸ್, ಐದು ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕಗೊಳಿಸಲಾಗಿದೆ.
Advertisement
ಬೆಂಗಳೂರು ಗ್ರಾಮಾಂತರ- ಸಿ.ಆರ್.ಗೌಡ, ಯಾದಗಿರಿ- ಬಸರೆಡ್ಡಿ, ಕೊಡಗು- ಧರ್ಮರಾಜ ಉತ್ತಪ್ಪ, ತುಮಕೂರು-ಚಂದ್ರಶೇಖರ ಗೌಡ, ಹಾಸನ- ಇ.ಎಚ್.ಲಕ್ಷ್ಮಣ ಅವರನ್ನು ನೇಮಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮತಿ ಮೇರೆಗೆ ಈ ನೇಮಕ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.