ಸೇಡಂ: ತಾಲೂಕಿನಲ್ಲಿ ಕೋವಿಡ್‌ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟರ್‌ಗಳನ್ನುನೇಮಿಸಲಾಗಿದೆ ಎಂದು ತಹಶೀಲ್ದಾರ್‌ಬಸವರಾಜ ಬೆಣ್ಣೆಶಿರೂರ ತಿಳಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿನಿಯಂತ್ರಿತ ಪ್ರದೇಶ ಹಾಗೂ ಘಟನಾನಿಯಂತ್ರಕರಾಗಿ ಜಿಲ್ಲಾ ಧಿಕಾರಿಯಿಂದನೇಮಕವಾದ ಅ ಧಿಕಾರಿಗಳೊಂದಿಗೆಸಭೆ ನಡೆಸಿ, ಅವರು ಮಾಹಿತಿನೀಡಿದರು.ಜಿಲ್ಲಾ ಧಿಕಾರಿಗಳ ಆದೇಶದಂತೆಪಟ್ಟಣದ ನಾಲ್ಕು ವಾರ್ಡ್‌ಗೆಒಬ್ಬರು, ಗ್ರಾಮೀಣಕ್ಕೆ ಮೂವರುಅಥವಾ ನಾಲ್ಕು ಗ್ರಾಪಂ ಕೇಂದ್ರಒಳಗೊಂಡಂತೆ ಅ ಧಿಕಾರಿಗಳನ್ನುಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೆಟ್‌ಗಳಾಗಿನೇಮಕ ಮಾಡಲಾಗಿದೆ.
ಯಾವ ಪ್ರದೇಶದಲ್ಲಿ ಹೆಚ್ಚಿನಸೊಂಕಿತರು ಕಂಡು ಬರುತ್ತಾರೆಯೋಅದನ್ನು ನಿಯಂತ್ರಿತ ಪ್ರದೇಶವನ್ನಾಗಿಘೋಷಣೆ ಮಾಡಲಾಗುತ್ತಿದೆ.ಮಳಖೇಡದ ಅಲ್ಟ್ರಾಟೆಕ್ ಸಿಮೆಂಟ್‌ಕಾರ್ಖಾನೆಯಲ್ಲಿ ಎರಡು ಪ್ರದೇಶವನ್ನುನಿಯಂತ್ರಿತ ಪ್ರದೇಶವನ್ನಾಗಿಘೋಷಿಸಲಾಗಿದೆ.
ನಿಯಂತ್ರಿತ ಪ್ರದೇಶದಲ್ಲಿನಸೋಂಕಿತರಿಗೆ ಅಗತ್ಯ ಸೌಲಭ್ಯಕಲ್ಪಿಸುವುದು, ಮನೆಯಿಂದಹೊರ ಬಾರದಂತೆ ನಿಗಾವಹಿಸಲುಅಗತ್ಯ ಸಿಬ್ಬಂದಿ ನೇಮಿಸಲಾಗಿದೆ.ಸೋಂಕಿತರು ಉಢಾಪೆ ಮಾಡಿದರೆಪ್ರಕರಣ ದಾಖಲಿಸುವ ಹಕ್ಕುಮ್ಯಾಜಿಸ್ಟ್ರೇಟ್‌ಗಳಿಗೆ ನೀಡಲಾಗಿದೆಎಂದು ತಿಳಿಸಿದರು.
ಸಭೆಯಲ್ಲಿ ಸಿಡಿಪಿಒ ಮುರುಗೇಶಗುಣಾರಿ, ಪುರಸಭೆ ಮುಖ್ಯಾಧಿ ಕಾರಿಸತೀಶ ಗುಡ್ಡೆ, ಗ್ವಾಲೇಶ ಹೊನ್ನಳ್ಳಿ,ಲೊಕೋಪಯೋಗಿ ಇಲಾಖೆ ಕೃಷ್ಣ ಅಗ್ನಿಹೋತ್ರಿ, ಎಇಇಚಂದ್ರಶೇಖರ ಮೋತಕಪಲ್ಲಿ, ಪ್ರಭಾರಗೊಬ್ಬೂರ, ರಾಮಚಂದ್ರ ಬಸೂದೆ,ರವಿಕುಮಾರರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಸತ್ಯಕುಮಾರ ಭಾಗೋಡಿ,ಗೋರಕನಾಥ, ಶರಣಬಸಪ್ಪ ಪಾಟೀಲ,ಪ್ರಶಾಂತ ಇತರರಿದ್ದರು.