ನವದೆಹಲಿ: ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ಭಿನ್ನಾಭಿಪ್ರಾಯ ಮುಂದುವರಿದಿರುವಂತೆಯೇ ಎರಡು ಹೈಕೋರ್ಟ್‌ಗಳಿಗೆ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ. ಈ ಬಗ್ಗೆ ನ್ಯಾಯಮೂರ್ತಿಗಳ ಸಮಿತಿ, ಕೊಲಿಜಿಯಂ ಸೂಚಿಸಿದ ಹೆಸರುಗಳಿಗೆ ಕೇಂದ್ರ ನ್ಯಾಯ ಖಾತೆ ಸಚಿವಾಲಯ ಅನುಮೋದನೆ ನೀಡಿ, ಹೆಸರುಗಳನ್ನು ಪ್ರಕಟಿಸಿದೆ.
ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಹಿರಿಯ ನ್ಯಾಯವಾದಿ ನೀಲಾ ಕೇದಾರ್ ಗೋಖಲೆ ಅವರನ್ನು ನೇಮಿಸಲಾಗಿದೆ. ಕೇದಾರ್ ಅವರು 2008ರ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿದ್ದ ಲೆ.ಕ. ಪ್ರಸಾದ್ ಪುರೋಹಿತ್ ಪರ ವಾದಿಸಿದ್ದರು.
ಆಂಧ್ರಪ್ರದೇಶ ಹೈಕೋರ್ಟ್‌ಗೆ ವೆಂಕಟ ಜ್ಯೋತಿರ್ಮಯಿ ಪ್ರತಾಪ ಹಾಗೂ ವೇಣುತುರುಮಲ್ಲಿ ಗೋಪಾಲ ಕೃಷ್ಣ ರಾವ್ ಅವರನ್ನು ಆಂಧ್ರಪ್ರದೇಶ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಿಸಲಾಗಿದೆ. ಅವರೆಲ್ಲರ ಹೆಸರುಗಳನ್ನು ಸುಪ್ರೀಂಕೋರ್ಟ್ ನೇತೃತ್ವದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳ ಸಮಿತಿ, ಕೊಲಿಜಿಯಂ ಜ.10ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು.