Advertisement

ಕೊಲೀಜಿಯಂ ಶಿಫಾರಸು 2 ತಿಂಗಳ ಬಳಿಕ ಅಂಗೀಕಾರ

12:32 AM Feb 05, 2023 | Team Udayavani |

ಹೊಸದಿಲ್ಲಿ: ಉನ್ನತ ನ್ಯಾಯಾಂಗ ನೇಮಕಾತಿ ವಿಚಾರದಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಶೀತಲ ಸಮರ ಮುಂದುವರಿದಿರುವಂತೆಯೇ, ಶನಿವಾರ ಸುಪ್ರೀಂ ಕೋರ್ಟ್‌ಗೆ ಐವರು ನ್ಯಾಯ ಮೂರ್ತಿಗಳ ನೇಮಕಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಈ ಮೂಲಕ ಈ ಹೆಸರುಗಳನ್ನು ಕೊಲಿಜಿಯಂ ಶಿಫಾರಸು ಮಾಡಿ 2 ತಿಂಗಳ ಬಳಿಕ ಅನುಮೋದನೆ ಸಿಕ್ಕಂತಾಗಿದೆ.

Advertisement

ರಾಜಸ್ಥಾನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಂಕಜ್‌ ಮಿತ್ತಲ್‌, ಪಟ್ನಾ ಹೈಕೋರ್ಟ್‌ ಸಿಜೆ ಸಂಜಯ್‌ ಕರೋಲ್‌, ಮಣಿಪುರ ಹೈಕೋರ್ಟ್‌ ಸಿಜೆ ಪಿ.ವಿ.ಸಂಜಯ್‌ ಕುಮಾರ್‌, ಪಟ್ನಾ ಹೈಕೋರ್ಟ್‌ ಜಡ್ಜ್ ಅಹ್ಸಾನುದ್ದೀನ್‌ ಅಮಾನುಲ್ಲಾ ಮತ್ತು ಅಲಹಾಬಾದ್‌ ಹೈಕೋರ್ಟ್‌ ಜಡ್ಜ್ ಮನೋಜ್‌ ಮಿಶ್ರಾ ಅವರು ಸುಪ್ರೀಂಗೆ ಪದೋನ್ನತಿ ಪಡೆದಿ ದ್ದಾರೆ.

ಕೊಲೀಜಿಯಂ ಮಾಡಿದ್ದ ಶಿಫಾರ ಸನ್ನು ಒಪ್ಪಲು ವಿಳಂಬ ಮಾಡಿದ ಸರಕಾ ರದ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌ ನ್ಯಾ| ಎಸ್‌.ಕೆ.ಕೌಲ್‌ ಮತ್ತು ನ್ಯಾ| ಎ.ಎಸ್‌.ಓಕಾ ಅವರನ್ನೊಳಗೊಂಡ ನ್ಯಾಯಪೀಠ, “ಇದೊಂದು ಅತ್ಯಂತ ಗಂಭೀರ ವಿಚಾರ. ನಾವು ಈ ವಿಚಾರದಲ್ಲಿ ನಿಮಗೆ ಮುಜು ಗರ ಉಂಟುಮಾಡುವಂಥ ಕ್ರಮ ಕೈಗೊ ಳ್ಳುವಂತೆ ಹಾಗೂ ಕಠಿನ ನಿರ್ಧಾರ ಕೈಗೊ ಳ್ಳುವಂತೆ ಮಾಡಬೇಡಿ’ ಎಂದು ಎಚ್ಚರಿ ಸಿತ್ತು. ರವಿವಾರದೊಳಗೆ ಶಿಫಾರಸಿಗೆ ಒಪ್ಪಿಗೆ ನೀಡುವುದಾಗಿ ಸರಕಾರ ತಿಳಿಸಿತ್ತು. ಅದರಂತೆ ಶನಿವಾರವೇ ಶಿಫಾರಸಿಗೆ ಅಂಗೀಕಾರ ದೊರೆತಿದೆ.

ಜನರೇ ಮಾಸ್ಟರ್‌: ಸಚಿವ ರಿಜಿಜು
ಕೊಲೀಜಿಯಂ ಶಿಫಾರಸಿಗೆ ಅಂಗೀ ಕಾರ ದೊರೆತ ಬಳಿಕವೂ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ನ್ಯಾಯಾಂಗದ ವಿರುದ್ಧದ ಅಸಮಾಧಾನವನ್ನು ಹೊರಹಾಕಿ ದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಸುಪ್ರೀಂ ಕೋರ್ಟ್‌ ಎಚ್ಚರಿಕೆ ಕೊಟ್ಟಿತು ಎಂಬ ಸುದ್ದಿಯನ್ನು ನಾನು ನೋಡಿದೆ. ಆದರೆ ನಮ್ಮ ದೇಶದಲ್ಲಿ ಜನರೇ ಮಾಸ್ಟರ್‌ಗಳು. ನಾವು ಕೇವಲ ಕೆಲಸಗಾರರು. ದೇಶದಲ್ಲಿ ಮಾಸ್ಟರ್‌ ಅಂತ ಯಾರಾದರೂ ಇದ್ದಾರೆ ಎಂದರೆ ಅದು ಜನ ಮಾತ್ರ. ಯಾವುದಾದರೂ ಮಾರ್ಗದರ್ಶಿ ಇದೆ ಎಂದರೆ ಅದು ಸಂವಿಧಾನ ಮಾತ್ರ. ಸಂವಿಧಾನ ದಂತೆಯೇ ಈ ದೇಶ ನಡೆಯುತ್ತದೆ. ನೀವು ಯಾರಿಗೂ ಎಚ್ಚರಿಕೆ ನೀಡುವ ಹಾಗಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next