ಹೊಸದಿಲ್ಲಿ: ಅಮೆರಿಕ ವೀಸಾ ಪಡೆಯಲು ಕಾಯುವಿಕೆ ಸಮಯವನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಹೊಸ ನಿಯಮವನ್ನು ಜಾರಿಗೆ ತಂದಿದೆ.
ವಿಶೇಷವಾಗಿ ಭಾರತೀಯರು ಬಿ1 ಮತ್ತು ಬಿ2 ವೀಸಾ(ಪ್ರವಾಸ ಮತ್ತು ಬಿಸೆನೆಸ್) ಪಡೆಯುವವರಿಗೆ ಇದು ಅನ್ವಯವಾಗಲಿದೆ ಎಂದು ಹೊಸದಿಲ್ಲಿಯಲ್ಲಿ ಇರುವ ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.
ಪ್ರಸ್ತುತ ಅಮೆರಿಕ ವೀಸಾಗಾಗಿ ಭಾರತೀಯರು ಕನಿಷ್ಠ 500 ದಿನಗಳು ಕಾಯಬೇಕಾದ ಪರಿಸ್ಥಿತಿ ಇದೆ.
“ಅಮೆರಿಕಕ್ಕೆ ತೆರಳಬೇಕೆಂದು ಬಯಸುವ ಭಾರತೀಯರು ವೀಸಾ ಪಡೆಯಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾ ಗುತ್ತಿದೆ. ಉದಾಹರಣೆಗೆ ಮುಂಬರುವ ತಿಂಗಳಲ್ಲಿ ಭಾರತೀಯರು ಥೈಯ್ಲೆಂಡ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯಿಂದ ಬಿ1 ಮತ್ತು ಬಿ2 ವೀಸಾಗಾಗಿ ಅಪಾಯಿಂಟ್‌ಮೆಂಟ್ ಪಡೆಯ ಬಹುದು,’ ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
“ರಾಯಭಾರ ಕಚೇರಿಯ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಹೊಸದಿಲ್ಲಿ, ಮುಂಬಯಿ, ಚೆನ್ನೈ, ಕೋಲ್ಕತಾ ಮತ್ತು ಹೈದರಾಬಾದ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಜ.21ರಂದು “ವಿಶೇಷ ಶನಿವಾರ ಸಂದರ್ಶನ ದಿನ’ ಆಯೋಜಿಲಾಗಿತ್ತು. ಎರಡು ವಾರಗಳ ಮೊದಲು 2.50 ಲಕ್ಷ ಹೆಚ್ಚುವರಿ ಬಿ1 ಮತ್ತು ಬಿ2 ವೀಸಾ ಅಪಾಯಿಂಟ್‌ಮೆಂಟ್ ನೀಡಲಾಗಿದೆ’ ಎಂದು ರಾಯಭಾರ ಕಚೇರಿ ತಿಳಿಸಿದೆ.