Advertisement
ಗೃಹ ರಕ್ಷಕ ಸಿಬ್ಬಂದಿ ಕೂಡ ಪೊಲೀಸರಂತೆ ಕರ್ತವ್ಯ ನಿರ್ವಹಿಸುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡು ವಲ್ಲಿಯೂ ಪೊಲೀಸರಿಗೆ ನೆರವಾಗುತ್ತಾರೆ. ಅವರಲ್ಲಿ ಮತ್ತಷ್ಟು ಆತ್ಮಸ್ಥೈರ್ಯ, ಭದ್ರತೆ ನೀಡಲು ಅಸಾಧಾರಣ ಸೇವೆ ಸಲ್ಲಿಸಿ, ಪದಕಗಳು ಹಾಗೂ ಪ್ರಶಂಸಾ ಪತ್ರಗಳನ್ನು ಪಡೆದವರನ್ನು ಪೊಲೀಸ್ ಇಲಾಖೆಗೆ ನೇಮಕ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
Related Articles
Advertisement
2016ರ ಸ್ವಾತಂತ್ರ್ಯೋತ್ಸವ ವಿಶಿಷ್ಟ ಸೇವಾ ಪದಕ ಹಾಗೂ 2014ರ ಸ್ವಾತಂತ್ರ್ಯೋತ್ಸವ ಶ್ಲಾಘನೀಯ ಸೇವಾ ಪದಕ: ಟಿ.ಭಾರತಿ – ಫ್ಲಟೂನ್ ಕಮಾಂಡರ್, ಜಿಲ್ಲಾಗೃಹ ರಕ್ಷಕ ದಳ, ಬೆಂಗಳೂರು ಉತ್ತರ. ಹನುಮಂತಪ್ಪ – ಸಹಾಯಕ ಬೋಧಕರು, ಜಿಲ್ಲಾ ಗೃಹರಕ್ಷಕ ದಳ, ಚಿಕ್ಕಮಗಳೂರು. ಸೋಮದಾಸ – ಘಟಕಾಧಿಕಾರಿ, ಜಿಲ್ಲಾ ಗೃಹರಕ್ಷಕ ದಳ ಮೈಸೂರು ಜಿಲ್ಲೆ. ಕ್ರಿಸ್ತಾ ದಯಾಕುಮಾರ್- ಫ್ಲಟೂನ್ ಕಮಾಂಡರ್, ಜಿಲ್ಲಾ ಗೃಹರಕ್ಷಕ ದಳ, ಚಿಕ್ಕಮಗಳೂರು.
2015ರ ಗಣರಾಜ್ಯೋತ್ಸವ ದಿನಾಚರಣೆ – ಶ್ಲಾಘನೀಯ ಸೇವಾ ಪದಕ: ಶಿವಕುಮಾರ್ – ಬೋಧಕರು, ಬೆಂಗಳೂರು ಗೃಹರಕ್ಷಕ ದಳ ( ಶಿವಕುಮಾರ್ ಮೃತಪಟ್ಟಿದ್ದು ಅವರ ಪತ್ನಿ ವಿಜಯಲಕ್ಷ್ಮೀ ಪದಕ ಸ್ವೀಕರಿಸಿದರು). ಚೆಲುವ ಶೆಟ್ಟಿ-ಸಹಾಯಕ ಬೋಧಕ, ಬೆಂಗಳೂರು. ಶಿವಣ್ಣ – ಚಾಲಕ ಜಿಲ್ಲಾ ಗೃಹರಕ್ಷಕ ದಳ, ಹಾಸನ. ಡಾ.ಶರೀಫ್ ಎಂ.ಎಸ್ – ಡಿವಿಜನಲ್ ವಾರ್ಡನ್, ಪೌರರಕ್ಷಣೆ ಬೆಂ. ನಗರ .
2015ನೇ ಸಾಲಿನ ಸ್ವಾತಂತ್ರೊತ್ಸವ ದಿನಾಚರಣೆ – ಶ್ಲಾಘನೀಯ ಸೇವಾ ಪದಕ: ಶ್ರೀನಿವಾಸ ಮೂರ್ತಿ ಎಂ. – ಕಂಪನಿ ಕಮಾಂಡರ್, ಬೆಂಗಳೂರು ಗ್ರಾಮಾಂತರ ಗೃಹರಕ್ಷಕ ದಳ. ಶಂಕರ್‌ರಾವ್ ಪಿ.- ಸೀನಿಯರ್ ಫ್ಲಟೂನ್ ಕಮಾಂಡರ್, ಬಳ್ಳಾರಿ ಗೃಹರಕ್ಷಕ ದಳ. ಎಂ.ರಾಜಣ್ಣ – ಬೋಧಕರು, ಗೃಹರಕ್ಷಕ ಮತ್ತು ಪೌರರಕ್ಷಣೆ ಅಕಾಡೆಮಿ, ಬೆಂಗಳೂರು .
2016ನೇ ಗಣರಾಜ್ಯೋತ್ಸವ ದಿನಾಚರಣೆ – ಶ್ಲಾಘನೀಯ ಸೇವಾ ಪದಕ: ಸುಧಾಕರ – ಫೂಟೂನ್ ಕಮಾಂಡರ್, ಜಿಲ್ಲಾ ಗೃಹರಕ್ಷಕ ದಳ, ಬೀದರ್. ನಾಗರಾಜ ವೀರಪ್ಪ ಆಲದಕಟ್ಟಿ – ಫೂಟೂನ್ ಕಮಾಂಡರ್, ಜಿಲ್ಲಾ ಗೃಹರಕ್ಷಕ ದಳ, ಧಾರವಾಡ. ಎಸ್.ಡಿ ಭಂಡಾರಿ – ಡಿವಿಜನಲ್ ವಾರ್ಡನ್, ಪೌರರಕ್ಷಣೆ, ಬೆಂ. ನಗರ .
2016ನೇ ಸಾಲಿನ ಸ್ವಾತಂತ್ರೊತ್ಸವ ದಿನಾಚರಣೆ – ಶ್ಲಾಘನೀಯ ಸೇವಾ ಪದಕ: ಜಿ.ಬಸವರಾಜು – ಎಸ್‌ಪಿಎಲ್‌ಸಿ, ಗೃಹರಕ್ಷಕ ದಳ, ಬಳ್ಳಾರಿ. ಮಂಜುನಾಥ್ ಶೆಟ್ಟಿಗಾರ್-ಎಸ್‌ಪಿಎಲ್‌ಸಿ, ಗೃಹರಕ್ಷಕ ದಳ, ಉಡುಪಿ. ಆರ್.ಸಿದ್ದಪ್ಪಾಜಿ – ಘಟಕಾಧಿಕಾರಿ, ಗೃಹರಕ್ಷಕ ದಳ, ಮೈಸೂರು.
2017ನೇ ಗಣರಾಜ್ಯೋತ್ಸವ ದಿನಾಚರಣೆ – ಶ್ಲಾಘನೀಯ ಸೇವಾ ಪದಕ: ಎಂ.ಶ್ರೀನಿವಾಸ – ಫೂಟೂನ್ ಕಮಾಂಡರ್, ಜಿಲ್ಲಾ ಗೃಹರಕ್ಷಕ ದಳ, ಬೆಂಗಳೂರು ಉತ್ತರ. ಕೆ.ಎಚ್ ಬ್ಯಾಡಗಿ – ಫೂಟೂನ್ ಕಮಾಂಡರ್, ಜಿಲ್ಲಾ ಗೃಹರಕ್ಷಕ ದಳ, ಧಾರವಾಡ. ದೇವಿಪ್ರಸಾದ ಶೆಟ್ಟಿ – ಡಿವಿಜನಲ್ ವಾರ್ಡನ್, ಪೌರರಕ್ಷಣೆ, ಬೆಂಗಳೂರು ನಗರ.
2017ನೇ ಸಾಲಿನ ಸ್ವಾತಂತ್ರ್ಯೋತ್ಸವ ದಿನಾಚರಣೆ – ಶ್ಲಾಘನೀಯ ಸೇವಾ ಪದಕ: ಡಾ.ಎಚ್.ಜೆ ಚಂದ್ರಕಾಂತ – ಸೀನಿಯರ್ ಫ್ಲಟೂನ್ ಕಮಾಂಡರ್, ದಾವಣಗೆರೆ ಗೃಹರಕ್ಷಕ ದಳ. ಬಿ.ಕೆ.ಬಸವಲಿಂಗ – ಫ್ಲಟೂನ್ ಕಮಾಂಡರ್, ಬಳ್ಳಾರಿ ಗೃಹರಕ್ಷಕ ದಳ. ಪಿ.ಟಿ. ಬಸವರಾಜಪ್ಪ – ಫ್ಲಟೂನ್ ಕಮಾಂಡರ್, ತುಮಕೂರು ಗೃಹರಕ್ಷಕ ದಳ. ಕೆ.ವಿ.ಮಂಜುನಾಥ – ಫ್ಲಟೂನ್ ಕಮಾಂಡರ್, ಗೃಹರಕ್ಷಕ ದಳ, ಬೆಂಗಳೂರು ಉತ್ತರ ಜಿಲ್ಲೆ
ಗೃಹ ಸಚಿವರ ಶ್ಲಾಘನೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಪೊಲೀಸ್ ಇಲಾಖೆಯನ್ನು ಬಲಪಡಿಸಲು ಇಲಾಖೆಯ ಸಿಬ್ಬಂದಿಯಲ್ಲಿ ನೈತಿಕ ಬಲ, ಆರ್ಥಿಕ ಬಲ ತುಂಬಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಉತ್ತರ ಕರ್ನಾಟಕದ ಪ್ರವಾಹ, ಹುಬ್ಬಳ್ಳಿಯಲ್ಲಿ ಸಂಭವಿಸಿದ ಕಟ್ಟಡ ದುರಂತ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಸಂಭವಿಸಿದ ಅವಘಡಗಳಲ್ಲಿ ಕ್ಷಿಪ್ರವಾಗಿ ಸ್ಪಂದಿಸಿ, ಅಗ್ನಿಶಾಮಕ ದಳ ಹಾಗೂ ವಿಪತ್ತು ನಿರ್ವಹಣಾ ಪಡೆ ಅತ್ಯುತ್ತಮ ಕಾರ್ಯ ನಿರ್ವಹಿಸಿದೆ ಎಂದು ಶ್ಲಾಘಿಸಿದರು.