Advertisement

10 ಸಾವಿರಕ್ಕೂ ಅಧಿಕ ಅರ್ಜಿ ವಿಲೇಗೆ ಬಾಕಿ; ಅಕ್ರಮ-ಸಕ್ರಮ ಯೋಜನೆ

11:20 AM Sep 12, 2022 | Team Udayavani |

ಪುತ್ತೂರು: ಅನಧಿಕೃತ ಸಾಗುವಳಿ ಸಕ್ರಮಕ್ಕೆ ಸಂಬಂಧಿಸಿ ತಾಲೂಕಿನಲ್ಲಿ ನಮೂನೆ-53, 57ರಲ್ಲಿ ಅರ್ಜಿ ಸ್ವೀಕಾರಗೊಂಡಿರುವ ಅರ್ಜಿಗಳ ಪೈಕಿ ಹತ್ತು ಸಾವಿರಕ್ಕೂ ಅಧಿಕ ಅರ್ಜಿ ವಿಲೇವಾರಿಗಾಗಿ ಕಾಯುತ್ತಿದೆ.

Advertisement

ಪುತ್ತೂರು ತಾಲೂಕಿನಲ್ಲಿ ನಮೂನೆ 53ರಲ್ಲಿ 19,359 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 4,093 ಅರ್ಜಿ ವಿಲೇ ಆಗಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗಿದೆ. 14,536 ಅರ್ಜಿ ತಿರಸ್ಕೃತಗೊಂಡು 730 ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ. ಇಲ್ಲಿ ಗರಿಷ್ಠ ಪ್ರಮಾಣದಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

57 ನಮೂನೆ ಪುತ್ತೂರು ತಾಲೂಕಿನಲ್ಲಿ ನಮೂನೆ 57ರಲ್ಲಿ 11,521 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 956 ಅರ್ಜಿ ವಿಲೇ ಆಗಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. 373 ಅರ್ಜಿ ತಿರಸ್ಕೃತಗೊಂಡು 10,192 ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ. 163 ಮಂದಿಯ ಹಕ್ಕುಪತ್ರ ವಿತರಣೆಗೆ ಬಾಕಿ ಇದೆ.

ವಿಲೇ ಪ್ರಕ್ರಿಯೆ ಹೇಗೆ? ಸಲ್ಲಿಕೆಯಾದ ಅರ್ಜಿ ಆಯಾ ಗ್ರಾಮಕರಣಿಕರ ಕಚೇರಿ ತಲುಪುತ್ತದೆ. ಗ್ರಾಮ ಕರಣಿಕರು, ಸರವೇಯರ್‌ ಆಯಾ ಅರ್ಜಿದಾರನ ಸ್ಥಳ ತನಿಖೆ ಮಾಡಿ ನಕ್ಷೆ ತಯಾರಿಸುತ್ತಾರೆ. ಗ್ರಾಮಕರಣಿಕರು ಪರಿಶೀಲಿಸಿ ಕ್ರಮಬದ್ಧವಾಗಿರುವುದನ್ನು ಕಂದಾಯ ನಿರೀಕ್ಷಕರ ಕಚೇರಿಗೆ ಕಳುಹಿಸುತ್ತಾರೆ. ಬಳಿಕ ಕಂದಾಯ ನಿರೀಕ್ಷಕರು ಸ್ಥಳ ತನಿಖೆ ಮಾಡಿ ಫೋಟೋ ತೆಗೆದು ದೃಢೀಕರಿಸಿ ತಾಲೂಕು ಕಚೇರಿಗೆ ಕಳುಹಿಸುತ್ತಾರೆ. ತಹಶೀಲ್ದಾರ್‌ ಪರಿಶೀಲಿಸಿ ಸಮರ್ಪಕವಾಗಿದ್ದರೆ ಶಿಫಾರಸು ಮಾಡಿ ಅಕ್ರಮ-ಸಕ್ರಮ ಸಮಿತಿ ಮುಂದಿಡುತ್ತಾರೆ.

ಶಾಸಕರ ನೇತೃತ್ವದ ಅಕ್ರಮ-ಸಕ್ರಮ ಸಮಿತಿ ಸಭೆ ಮಂಜೂರಾತಿ ನೀಡುತ್ತದೆ. ತಾಲೂಕಿನಲ್ಲಿ ಹೋಬಳಿಗೆ ಓರ್ವ ಕಂದಾಯ ನಿರೀಕ್ಷಕರು ಇರುತ್ತಾರೆ. ಪ್ರತೀ ತಾಲೂಕಿನಲ್ಲಿ ಹೆಚ್ಚೆಂದರೆ ಎರಡರಿಂದ ಮೂರು ಹೋಬಳಿ ಇದೆ. ಈ ಕಂದಾಯ ನಿರೀಕ್ಷಕರು ಅಕ್ರಮ ಸಕ್ರಮದ ಅರ್ಜಿದಾರರ ಪ್ರತೀ ಮನೆಗೆ ತೆರಳಿ ಫೋಟೋ ತೆಗೆದು ಕಡತಕ್ಕೆ ದಾಖಲಿಸಬೇಕು.ಸಕ್ರಮಕ್ಕೆ ಮೂರು ಅವಕಾÍ 1964ರ ಕರ್ನಾಟಕ ಭೂ ಕಂದಾಯ ಕಾಯ್ದೆಗೆ 1991ರಲ್ಲಿ ತಿದ್ದುಪಡಿ ತಂದು ನಮೂನೆ-50ರಲ್ಲಿ ಆರು ತಿಂಗಳ ಕಾಲ ಅರ್ಜಿ ಸ್ವೀಕಾರ ನಡೆದಿತ್ತು.

Advertisement

ಬಾಕಿ ಉಳಿದವರಿಗೆ 1998ರ ನ. 1ರಿಂದ 1999ರ ಎ. 30ರ ವರೆಗೆ ನಮೂನೆ- 53ರಲ್ಲಿ ಮತ್ತು 2018 ನವೆಂಬರ್‌ನಿಂದ ನಮೂನೆ-57ರಲ್ಲಿ ಅವಕಾಶ ನೀಡಲಾಗಿತ್ತು. ಇದೀಗ ಮತ್ತೆ ನಮೂನೆ 57 ರಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next