Advertisement

ಪ್ರಣಬ್‌ ಭಾಷಣದ ನಂತರ ಹೆಚ್ಚಿದೆ ಆರೆಸ್ಸೆಸ್‌ಗೆ ಅರ್ಜಿ

10:19 AM Jun 27, 2018 | |

ಕೋಲ್ಕತ: ಇತ್ತೀಚೆಗಷ್ಟೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಕ್ಷಾ ವರ್ಗವನ್ನುದ್ದೇಶಿಸಿ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಮಾತನಾಡಿದ ನಂತರದಲ್ಲಿ ಆರೆಸ್ಸೆಸ್‌ ಸೇರ್ಪಡೆ ವಿನಂತಿ ಮಾಡಿದವರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. ಅದರಲ್ಲೂ ಪ.ಬಂಗಾಳದಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಜನರು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಆರೆಸ್ಸೆಸ್‌ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

Advertisement

ಸಾಮಾನ್ಯವಾಗಿ 370 ವಿನಂತಿಗಳು ಬರುತ್ತಿದ್ದವು. ಆದರೆ ಪ್ರಣಬ್‌ ಜೂನ್‌ 7 ರಂದು ಭಾಷಣ ಮಾಡಿದ ನಂತರದಲ್ಲಿ, ನಿತ್ಯ 1200 -1300 ಅರ್ಜಿಗಳು ಬರುತ್ತಿವೆ. ಜೂನ್‌7 ರಂದೇ 1779 ಅರ್ಜಿಗಳು ಬಂದಿದ್ದವು. ಈ ಪೈಕಿ ಶೇ. 40ರಷ್ಟು ಬಂಗಾಳದ ಅರ್ಜಿಗಳು ಎಂದು ಹಿರಿಯ ಆರೆಸ್ಸೆಸ್‌ ಮುಖಂಡ ಬಿಪ್ಲಬ್‌ ರಾಯ್‌ ಹೇಳಿದ್ದಾರೆ. ಪ್ರಣಬ್‌ ಭಾಷ ಣ ದಿಂದಲೇ ಅರ್ಜಿಗಳ ಸಂಖ್ಯೆಯಲ್ಲಿ  ಏರಿಕೆಯಾಗಿದೆ  ಎಂದು  ಹೇಳಲಾಗದು. ಆದರೆ ಪ್ರಣಬ್‌ ಶಿಕ್ಷಾ ವರ್ಗವನ್ನು ಉದ್ದೇಶಿಸಿ ಮಾತನಾಡಿದ್ದರಿಂದ  ಜನ ಸಾಮಾನ್ಯರಲ್ಲಿ ಆರೆಸ್ಸೆಸ್‌ ಅನ್ನು ಸ್ವೀಕರಿಸುವ ಪ್ರಮಾಣ ಹೆಚ್ಚಳವಾಗಿದೆ ಎಂದು ರಾಯ್‌ ಹೇಳಿದ್ದಾರೆ. ಪ್ರಣಬ್‌ ಮುಖರ್ಜಿ ಶಿಕ್ಷಾ ವರ್ಗವನ್ನು ಉದ್ದೇಶಿಸಿ ಭಾಷಣ ಮಾಡಲು ಸಮ್ಮತಿ ಸಿದ್ದು ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳು  ತೀವ್ರ ವಿರೋಧ ವ್ಯಕ್ತಪಡಿಸಿದ್ದವು. 
 

Advertisement

Udayavani is now on Telegram. Click here to join our channel and stay updated with the latest news.

Next