ವಿಟ್ಲ: ಸಿಇಟಿಯಲ್ಲಿ ಆರ್ಥಿಕ ವಾಗಿ ಹಿಂದುಳಿದವರಿಗೆ (ಇ.ಡಬ್ಲ್ಯು.ಎಸ್.) ಮೀಸಲಾತಿ ವ್ಯವಸ್ಥೆಯನ್ನು ಜಾರಿಗೊಳಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಕೈಗಾರಿಕಾ ತರಬೇತಿ, ಉದ್ಯೋಗ ಇಲಾಖೆಯು ವಿಟ್ಲ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ನಿರ್ಮಿಸಿದ ನೂತನ ಕಟ್ಟಡದ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಪತ್ರಕರ್ತರ ಜತೆ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೇಂದ್ರ ಸರಕಾರದ ಯೋಜನೆಯಾ ಗಿದ್ದು, ಸಿಇಟಿ ವಿಚಾರದಲ್ಲಿ ಈ ಬಗ್ಗೆ ರಾಜ್ಯಸರಕಾರ ಇನ್ನೂ ತೀರ್ಮಾನ ತೆಗೆದು ಕೊಂಡಿಲ್ಲ.
ಇದರಿಂದಾಗಿ ನೀಟ್, ಜೆಇಇ ಇತ್ಯಾದಿಗಳಲ್ಲಿ ಆರ್ಥಿಕವಾಗಿ ಹಿಂದುಳಿ ದವರಿಗೆ ಸಿಗುತ್ತಿರುವ ಮೀಸಲಾತಿ ಸೌಲಭ್ಯ ಸಿಇಟಿಯಲ್ಲಿ ಲಭ್ಯವಾಗುತ್ತಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ವಿಚಾರ ಮುನ್ನೆಲೆಗೆ ಬಂದಿತ್ತಾದರೂ ಬಳಿಕ ನನೆಗುದಿಗೆ ಬಿದ್ದಿತ್ತು.