Advertisement

ದೀಪಾವಳಿಗೆ ಆ್ಯಪಲ್‌ ಕಂಪನಿಯ ಐಫೋನ್‌ 14 ದೇಶದಲ್ಲಿ ಲಭ್ಯ?

10:11 PM Aug 24, 2022 | Team Udayavani |

ನವದೆಹಲಿ: ಆ್ಯಪಲ್‌ ಕಂಪನಿಯ ಐಫೋನ್‌ 14 ದೇಶದಲ್ಲಿಯೇ ಉತ್ಪಾದನೆಯಾಗುವ ಸಾಧ್ಯತೆ ಇದ್ದು, ದೀಪಾವಳಿಗೆ “ಮೇಡ್‌ ಇನ್‌ ಇಂಡಿಯಾ’ ಫೋನ್‌ ಲಭ್ಯವಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

Advertisement

ದೇಶದಲ್ಲಿ ಈಗಾಗಲೇ ಫಾಕ್ಸ್‌ಕಾನ್‌, ವಿಸ್ಟ್ರಾನ್‌ ಮತ್ತು ಪೆಗಟ್ರಾನ್‌ ಸಂಸ್ಥೆಗಳು ಐಫೋನ್‌ಗಳ ಬೇರೆ ಬೇರೆ ಮಾಡೆಲ್‌ಗ‌ಳನ್ನು ಉತ್ಪಾದಿಸುತ್ತಿವೆ. ಅದಕ್ಕೆ ಪೂರಕವಾಗಿ ಬಹುನಿರೀಕ್ಷಿತ ಐಫೋನ್‌ 14 ಜಗತ್ತಿನ ಇತರ ಭಾಗದಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ಐಫೋನ್‌ 14, ಐಫೋನ್‌ 14 ಮಿನಿ/ಮ್ಯಾಕ್ಸ್‌, ಐಫೋನ್‌ 14 ಪ್ರೊ, ಐಫೋನ್‌ 14 ಪ್ರೋ ಮ್ಯಾಕ್ಸ್‌ ಒಮ್ಮೆಲೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದ್ದು, ಅದಕ್ಕೆ ಬೇಡಿಕೆಯೂ ಹೆಚ್ಚೇ ಇರುವ ಅಂದಾಜಿದೆ.

Advertisement

Udayavani is now on Telegram. Click here to join our channel and stay updated with the latest news.

Next