ಚಿಕ್ಕಬಳ್ಳಾಪುರ: An apple keeps a doctor away ಸೇಬು ವೈದ್ಯರನ್ನು ದೂರವಿರಿಸುತ್ತದೆ ಎಂಬ ಮಾತಿದೆ ಆದರೆ 11 ವರ್ಷ ಪ್ರಾಯದ ಬಾಲಕನೊಬ್ಬನ ಪ್ರಾಣಕ್ಕೆ ಕುತ್ತು ತಂದ ಘಟನೆ ಶನಿವಾರ ಕೆಳಗಿನ ತೋಟದ ಬಡಾವಣೆಯಲ್ಲಿ ನಡೆದಿದೆ.
ಜ್ವರದಿಂದ ಬಳಲುತ್ತಿದ್ದ ತೌಸೀಫ್ ಎಂಬ ಬಾಲಕನಿಗೆ ಪೋಷಕರು ಆರೋಗ್ಯ ಸುಧಾರಿಸಲಿ ಎಂದು ತಿನ್ನಲು ಸೇಬು ನೀಡಿದ್ದರು. ಆದರೆ ಅದು ತಿನ್ನುತ್ತಿರುವಾಗಲೇ ಉಸಿರಾಡಲು ಸಾಧ್ಯವಾಗದೆ ಒದ್ದಾಡಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ ಎಂದು ತಿಳಿದು ಬಂದಿದೆ.
ಪೋಷಕರು ಮಗನ ಸಾವಿನಿಂದ ಕಂಗಾಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಿದಾಗ ಸೇಬು ಶ್ವಾಸಕೋಶದ ನಾಳಕ್ಕೆ ಸಿಲುಕಿ ಸಾವನ್ನಪ್ಪಿರುವುದು ಬಯಲಾಗಿದೆ.
ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣವೂ ದಾಖಲಾಗಿದೆ.