Advertisement
ಕೊರಿಯಾ ಮೂಲದ ವರದಿಯ ಪ್ರಕಾರ ಆ್ಯಪಲ್ ಕಂಪನಿಯು ತನ್ನ ಐ ಪೋನ್ 13 ಸರಣಿಯನ್ನು ಸದ್ಯದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದು, ತನ್ನ ಹಿಂದಿನ ಆವೃತ್ತಿಯ ಮೊಬೈಲ್ ಗಿಂತ ಅತ್ಯಾಕರ್ಷಕವಾದ ವಿನ್ಯಾಸದೊಂದಿಗೆ ಹಲವಾರು ವೈಶಿಷ್ಟ್ಯತೆಗಳನ್ನು ಇದು ಹೊಂದಿರಲಿದೆ ಎನ್ನಲಾಗಿದೆ.
Related Articles
Advertisement
ಈ ಕುರಿತಾಗಿ ಇನ್ನು ಕೆಲವೇ ದಿನಗಳಲ್ಲಿ ಐ ಪೋನ್ ಕಂಪನಿಯು ತನ್ನ ಹೊಸ ಸರಣಿಯೊಂದನ್ನು ಬಿಡುಗಡೆಗೊಳಿಸಲಿದೆ ಎಂದು ಪ್ರಸಿದ್ಧ ಟಿಪ್ ಸ್ಟಾರ್ ಜಾನ್ ಅವರು ಹೇಳಿಕೆ ನೀಡುವ ಮೂಲಕ ಐ ಪೋನ್ 13 ಕುರಿತಾದ ಸುಳಿವನ್ನು ನೀಡಿದ್ದರು.
ಈ ಸಂದರ್ಭದಲ್ಲಿ ಅವರು ಐ ಪೋನ್ ಮುಂಬರುವ ಸರಣಿಯ ಮೊಬೈಲ್ ಪೋನ್ ಹಲವಾರು ವಿಭಿನ್ನ ಸೌಲಭ್ಯಗಳನ್ನು ಒಳಗೊಂಡಿರುತ್ತದೆ ಹಾಗೂ ಇದು ಪೋರ್ಟ್ ಲೆಸ್ ಆಗಿರಲಿದೆ. ಇದು ಸಂಪೂರ್ಣ ಪೋರ್ಟ್ ಲೆಸ್ ಆಗಿರುವುದರಿಂದ ಚಾರ್ಜಿಂಗ್ ಅನ್ನು ಮ್ಯಾಗ್ ಸೇಫ್ ಮೂಲಕ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಮ್ಮ ಟ್ಟೀಟ್ ಸಂದೇಶದ ಮೂಲಕ ಮಾಹಿತಿ ಹಂಚಿಕೊಂಡಿದ್ದರು.
ಮ್ಯಾಗ್ ಸೇಫ್ ಇದು ಆಯಸ್ಕಾಂತೀಯವಾಗಿ ಜೋಡಿಸಲಾಗಿರುವ ವೈರ್ ಲೆಸ್ ವಿದ್ಯುತ್ ವರ್ಗಾವಣಾ ವ್ಯವಸ್ಥೆಯಾಗಿದ್ದು, ಈ ತಂತ್ರಜ್ಞಾನದ ಕುರಿತಾದ ಯಾವುದೇ ಮಾಹಿತಿಗಳನ್ನು ಸಂಸ್ಥೆ ಈವರೆಗೆ ಬಹಿರಂಗಪಡಿಸಿಲ್ಲ.