Advertisement

ಇನ್ನೆರಡು ವರ್ಷಗಳಲ್ಲಿ ಭಾರತದಲ್ಲೇ ತಯಾರಾಗಲಿದೆ ಐ-ಫೋನ್

09:53 AM Nov 28, 2019 | |

ಹೊಸದಿಲ್ಲಿ: ಫೋನ್‌ ಬಳಕೆದಾರರ ಹಾಟ್‌ ಫೇವರಿಟ್‌ ಆ್ಯಪಲ್‌ ಐ ಫೋನ್‌ ಇನ್ನು ನಮ್ಮಲ್ಲೇ ತಯಾರಾಗುವ ದಿನಗಳು ದೂರವಿಲ್ಲ. ಆ್ಯಪಲ್ ಈಗಾಗಲೇ ಭಾರತದಲ್ಲಿ ಐಫೋನ್‌ ಬಿಡಿ ಭಾಗಗಳನ್ನು ಜೋಡಿಸುವ ಕೇಂದ್ರವನ್ನು ತೆರೆದಿದೆ. ಇದೀಗ ಐಫೋನ್‌ಗೆ ಚಾರ್ಜರ್‌ಗಳನ್ನು ಪೂರೈಸುವ ಫಿನ್ಲಂಡ್‌ನ‌ ಸಾಲ್ಕಾಂಪ್‌ ಕಂಪೆನಿ ಚೆನ್ನೈನಲ್ಲಿರುವ ನೋಕಿಯಾದ ಹಳೆಯ ತಯಾರಿಕಾ ಕೇಂದ್ರವನ್ನು ಖರೀದಿಸಿದೆ. ಈ ಘಟಕದಲ್ಲಿ ಈ ಕಂಪೆನಿ 2 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ.

Advertisement

ಇದರಿಂದಾಗಿ ಸುಮಾರು 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೇ ಭಾರತದಲ್ಲೇ ತಯಾರಾದ ಐಫೋನ್‌ ಎಕ್ಸ್.ಆರ್‌. ಖರೀದಿಸಿದ ಖುಷಿಯನ್ನು ಸಚಿವರು ಇದೇ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

ಈಗಾಗಲೇ ಬೆಂಗಳೂರಿನಲ್ಲಿ ಆಪಲ್‌ ಐಫೋನ್‌ ಎಕ್ಸ್.ಆರ್‌. ಮತ್ತು ಐಪೋನ್‌ 7ನ ಬಿಡಿಭಾಗಗಳ ಜೋಡಣಾ ಘಟಕ ಕಾರ್ಯಾರಂಭ ಮಾಡಿದೆ. ಮುಂಬರುವ ದಿನಗಳಲ್ಲಿ ಬೇರೆ ರಾಷ್ಟ್ರಗಳಿಗೆ ಇಲ್ಲಿಂದಲೇ ಐಫೋನ್ ಪೂರೈಕೆ ಮಾಡುವ ಉದ್ದೇಶವನ್ನು ಕಂಪೆನಿ ಹೊಂದಿದೆ.

ಚೀನಾ ಮತ್ತು ಅಮೆರಿಕಾ ದೇಶಗಳ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರದ ಲಾಭವನ್ನು ಪಡೆಯಲು ಭಾರತ ಪ್ರಯತ್ನಿಸುತ್ತಿದ್ದು, ಚೀನದಿಂದ ಹೊರಬರಲಿರುವ ಅಮೆರಿಕಾ ಕಂಪೆನಿಗಳಿಗೆ ತನ್ನ ನೆಲದಲ್ಲಿ ಉತ್ಪಾದನಾ ಅವಕಾಶವನ್ನು ಕಲ್ಪಿಸಿಕೊಡಲು ಭಾರತ ಇದೀಗ ಮುಕ್ತ ಅವಕಾಶ ನಿರ್ಮಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next