ನ್ಯೂಯಾರ್ಕ್ : ಮಹತ್ವದ ಬೆಳವಣಿಗೆಯಲ್ಲಿ ಆ್ಯಪಲ್ ಮತ್ತು ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಎಪಿಕ್ಸ್ ಗೇಮ್ಸ್ ಫೋರ್ಟ್ ನೈಟ್ ಅನ್ನು ತೆಗೆದುಹಾಕಿದೆ. ಮಾತ್ರವಲ್ಲದೆ ಪಾವತಿ ನೀತಿಗಳನ್ನು ಉಲ್ಲಂಘಿಸಿದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.
ಆದರೇ ಪೋರ್ಟ್ ನೈಟ್ ಅನ್ನು ತೆಗೆದುಹಾಕಿದ್ದಕ್ಕಾಗಿ ಗೂಗಲ್ ಮತ್ತು ಆ್ಯಪಲ್ ಎರಡರ ವಿರುದ್ದವೂ ಎಪಿಕ್ ಗೇಮ್ಸ್ ಮೊಕ್ಕದ್ದಮೆ ಹೂಡಿದೆ, ಇದು ಟೈಕ್ ದೈತ್ಯರ ಮತ್ತು ಎಪಿಕ್ ಗೇಮ್ ನಡುವೆ ನಡೆಯುತ್ತಿರುವ ವಿವಾದವನ್ನು ಇನ್ನಷ್ಟು ಹೆಚ್ಚಿಸಿದೆ.
ಸೆನ್ಸಾರ್ ಟವರ್ ವರದಿ ಪ್ರಕಾರ ಫೋರ್ಟ್ ನೈಟ್ ಗೇಮ್ ಅನ್ನು ಸುಮಾರು 350 ಮಿಲಿಯನ್ ಜನರು ಜಗತ್ತಿನಾದ್ಯಂತ ಆಡುತ್ತಿದ್ದರು. ಇದೀಗ ಈ ಗೇಮಿಂಗ್ ಆ್ಯಪ್ ಅನ್ನು ಗೂಗಲ್ ಮತ್ತು ಆ್ಯಪಲ್ ಸ್ಟೊರ್ ನಿಂದ ರಿಮೂವ್ ಮಾಡಿದಕ್ಕಾಗಿ ಗೇಮ್ ಡೆವಲಪರ್ ಗೆ ಭಾರೀ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಫೋರ್ಟ್‌ನೈಟ್ ಗಾಗಿ ಇತ್ತೀಚಿಗೆ ಎಪಿಕ್ ಗೇಮ್ಸ್ ಹೊಸ ಅಪ್ ಡೇಟ್ ವರ್ಷನ್ ರೂಪಿಸಿತ್ತು. ಅದರ ಜೊತೆಗೆ ಫೋರ್ಟ್‌ನೈಟ್ ಗೆ ಸಂಬಂಧಿಸಿದ ಪೇಮೆಂಟ್ ಗಳನ್ನು ನೇರವಾಗಿ ಎಪಿಕ್ ಗೆ ಪಾವತಿಸಲು ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿತು. ಇದು ಗೂಗಲ್ ಮತ್ತು ಆ್ಯಪಲ್ ನೀತಿಗೆ ವಿರುದ್ಧವಾಗಿತ್ತು.
ಹಾಗಾಗಿ ಕೂಡಲೇ ಆ್ಯಪಲ್ ತನ್ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಕ್ಕಾಗಿ ಸ್ಟೋರ್ ನಿಂದ ಪೋರ್ಟ್ ನೈಟ್ ಅನ್ನು ರಿಮೂವ್ ಮಾಡಿದೆ. ಇದರ ಬೆನ್ನಲ್ಲೆ ಗೂಗಲ್ ಕೂಡ ಕ್ರಮ ಕೈಗೊಂಡಿದೆ.