Advertisement

ಆ್ಯಪಲ್ ಸಿಇಒ ಟಿಮ್ ಕುಕ್ ವೇತನದಲ್ಲಿ ಶೇ 40ರಷ್ಟು ಕಡಿತ

09:11 PM Jan 13, 2023 | Team Udayavani |

ನವದೆಹಲಿ : ಯಶಸ್ವಿ ಸಂಸ್ಥೆಗಳ ಸಿಇಒ ಸ್ಥಾನದಲ್ಲಿರುವವರ ವೇತನ ಕಡಿಮೆಯಾಗುವುದೂ ಇಲ್ಲ. ಆದರೆ, ಆ್ಯಪಲ್‌ ಸಿಇಒ ಟಿಮ್‌ ಕುಕ್‌, ತಮಗೆ ನೀಡುತ್ತಿರುವ ವೇತನ ಜಾಸ್ತಿ ಇದ್ದು, ಅದನ್ನು ಕಡಿಮೆ ಮಾಡಿ ಹೇಳಿದ್ದಲ್ಲದೆ, ಅದರಂತೆ ನಡೆದುಕೊಂಡಿದ್ದಾರೆ.

Advertisement

2022ರಲ್ಲಿ ಕುಕ್‌ ಅವರಿಗೆ 98.7 ದಶಲಕ್ಷ ಡಾಲರ್‌ ವೇತನ ನೀಡಲಾಗಿತ್ತು. ಷೇರುದಾರರ ವಾರ್ಷಿಕ ಸಭೆಯ ಬಳಿಕ ಹೂಡಿಕೆ ದಾರರ ಸಲಹೆ ಹಾಗೂ ಸ್ವತಃ ಕುಕ್‌ ಅವರೇ ವೇತನ ಕಡಿತಕ್ಕೆ ಮನವಿ ಮಾಡಿದ ಹಿನ್ನೆಲೆ 2023ರಲ್ಲಿ ಅವರಿಗೆ ನೀಡಲಿರುವ ವೇತನವನ್ನ ಶೇ. 40ರಷ್ಟು ಕಡಿತಗೊಳಿಸಿ,49 ದಶಲಕ್ಷ ಡಾಲರ್‌ಗೆ ಇಳಿಕೆ ಮಾಡಲಾಗಿದೆ.

ಇದೇ ವೇಳೆ ಕುಕ್‌ ಅವರಿಗೆ ನೀಡುವ ಷೇರಿನ ಪ್ರಮಾಣವನ್ನು 2023ರಲ್ಲಿ 50 ರಿಂದ 75ಕ್ಕೆ ಹೆಚ್ಚಿಸಲು ಸಂಸ್ಥೆ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next