Advertisement

ಐಫೋನ್-11 ಬಳಕೆದಾರರಿಗೆ ಬಿಗ್ ಆಫರ್ ನೀಡಿದ ಆ್ಯಪಲ್: ಏನದು ?

08:31 PM Dec 06, 2020 | Adarsha |

ನವದೆಹಲಿ: ಜನಪ್ರಿಯ ಆ್ಯಪಲ್ ಸಂಸ್ಥೆ ತನ್ನ ಐಫೋನ್-11 ಬಳಕೆದಾರರಿಗೆ ಹೊಸ  ಆಫರ್ ಒಂದನ್ನು ನೀಡಿದೆ.

Advertisement

ಐಫೋನ್11 ನಲ್ಲಿ ಡಿಸ್ ಪ್ಲೇ ಸಮಸ್ಯೆ ಎದುರಾದರೆ, ಕಂಪನಿಯೇ ಉಚಿತವಾಗಿ ಅದನ್ನು ಬದಲಾಯಿಸಿ ಕೊಡಲಿದೆ.  ಹಲವು ಆ್ಯಪಲ್ ಫೋನ್ ಗಳಲ್ಲಿ ಈ ಸಮಸ್ಯೆ ಕಂಡುಬಂದಿದ್ದರಿಂದ ಸಂಸ್ಥೆಯು ಈ ನಿರ್ಧಾರವನ್ನು ಕೈಗೊಂಡಿದೆ.

ಕಳೆದ 2019 ನವೆಂಬರ್ ನಿಂದ ಮೇ 2020ರ ಅವಧಿಯಲ್ಲಿ ತಯಾರಿಸಲಾದ ಸೀಮಿತ ಸಂಖ್ಯೆಯ ಐಫೋನ್-11 ಆವೃತ್ತಿಯಲ್ಲಿ ‘ಡಿಸ್ ಪ್ಲೇ ಟಚ್’ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಕೆಲವು ಬಳಕೆದಾರರು ತೊಂದರೆಗೆ ಸಿಲುಕಿದ್ದರು. ಹೀಗಾಗಿ ಅಂತಹ ಬಳಕೆದಾರರಿಗೆ ಉಚಿತವಾಗಿ ಡಿಸ್ ಪ್ಲೇ ಬದಲಿಸಿಕೊಡಲಾಗುವುದು ಅಥವಾ ರಿಪೇರಿ ಮಾಡಿಕೊಡಲಾಗುವುದು ಎಂದು ಆ್ಯಪಲ್ ಸಂಸ್ಥೆ ತಿಳಿಸಿದೆ.

ಆಫರ್  ಪರಿಶೀಲಿಸುವುದು ಹೇಗೆ?

ಆ್ಯಪಲ್  ಐಫೋನ್-11ಬಳಕೆದಾರರು ತಮ್ಮ ಮೊಬೈಲ್ ಪೋನಿಗೆ ಈ ಸೌಲಭ್ಯ  ದೊರೆಯುತ್ತದೆಯೇ ಎಂದು ಪರಿಶೀಲಿಸುದಕ್ಕಾಗಿ ಕಂಪನಿಯು ಪ್ರತ್ಯೇಕ ಸಪೋರ್ಟ್ ಪೇಜ್ ತೆರೆದಿದೆ. ಇಲ್ಲಿ ಬಳಕೆದಾರರು ತಮ್ಮ ಐಫೋನ್-11 ನ ಸೀರಿಯಲ್ ಸಂಖ್ಯೆಯನ್ನು ನಮೂದಿಸಬಹುದಾಗಿದೆ. ಈ ಮೂಲಕ ತಮ್ಮ ಮೊಬೈಲ್ ಪೋನಿಗೆ ಉಚಿತ ‘ಡಿಸ್ ಪ್ಲೇ ರೀ-ಪ್ಲೇಸ್ ಮೆಂಟ್’ ಸೌಲಭ್ಯ ಇದೆಯೇ ? ಇಲ್ಲವೇ ? ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಸಪೋರ್ಟ್ ಪೇಜ್  ನಲ್ಲಿ ಆ್ಯಪಲ್  ಐಫೋನ್-11 Display Replacement ಸೌಲಭ್ಯ  ನಿಯಮಗಳನ್ನು ತಿಳಿಸಿದ್ದು, ಈ ನಿಯಮಗಳ  ಅನ್ವಯ  ಸಮಸ್ಯೆ ಇರುವವರು ತಮ್ಮ ಮೊಬೈಲ್ ಪೋನ್ ಅನ್ನು ಆ್ಯಪಲ್ ಸರ್ವಿಸ್ ಸೆಂಟರ್ ಗೆ ಕಳಿಹಿಸಿಕೊಡಬಹುದು.

Advertisement

ಇದನ್ನೂ ಓದಿ: ಊಟ ಕೊಡಿಸುವುದಾಗಿ ಕರೆದೊಯ್ದು ಆಸ್ಪತ್ರೆ ವಾರ್ಡ್ ಬಾಯ್ ಮತ್ತುಸ್ನೇಹಿತರಿಂದ ಬಾಲಕಿಯ ಅತ್ಯಾಚಾರ

ಬಳಕೆದಾರರು ಐಫೋನ್-11 ನಲ್ಲಿ Setting- General -About ನಲ್ಲಿ ನಿಮ್ಮ ಮೊಬೈಲ್ ನ ಸೀರಿಯಲ್ ಸಂಖ್ಯೆಯನ್ನು ತಿಳಿದುಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next