ಇಂಡಿ: ಇತ್ತೀಚೆಗೆ ಆಕಾಲಿಕ ಮಳೆಯಿಂದ ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಬುಧವಾರ ಕಂದಾಯ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡದೆ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಮಾತನಾಡಿ ಅವರು, ತಾಲೂಕಿನ ಬರಗುಡಿ, ಪಡನೂರ, ಲೋಣಿ, ಆಳೂರ, ಇಂಗಳಗಿ, ಹಿರೇರೂಗಿ ಹಲವಾರು ಗ್ರಾಮಗಳಲ್ಲಿ ತೋಟಗಾರಿಕ್ಕೆ ಬೆಳೆಗಳಾದ ಬಾಳೆ, ದಾಳಿಂಬೆ, ನಿಂಬೆ, ಉಳ್ಳಾಗಡಿ, ಮಾವು, ತೆಂಗು, ದ್ರಾಕ್ಷಿ ಬೆಳೆಗಳು ಅಕಾಲಿಕ ಮಳೆಯಿಂದ ಬೆಳೆಗಳು ಹಾನಿಯಾಗಿವೆ. ಕೊಡಲೆ ಸಂಬಂಧಿಸಿದ ತಾಲೂಕಾಧಿಕಾರಿಗಳು ರೈತರ ಜಮೀನುಗಳಿಗೆ ಹೊಗಿ ಸರ್ವೇ ಮಾಡಬೇಕು. ಬೆಳೆಹಾನಿಯಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪರುತಯ್ಯ ಮಠಪತಿ, ಸುಧಾಮ ನಾಗಣಿ, ಸೈಫನ್ ಇಂಡಿಕರ, ಯಶವಂತ ಹೂಗಾರ, ನಾಗೇಂದ್ರ ಬಿರಾದಾರ, ಗುಂಡುಗೌಡ ಬಿರಾದಾರ ಸೇರಿದಂತೆ ಅನೇಕರು ಇದ್ದರು.