Advertisement

ಸಾರಿಗೆ ಸಚಿವರಿಗೆ ಸಾವಳಗಿ ಗ್ರಾಮಸ್ಥರ ಮನವಿ

10:01 PM Jan 02, 2022 | Team Udayavani |

ಜಮಖಂಡಿ: ತಾಲೂಕಿನ ಹಂಚಿನಾಳ- ಗಲಗಲಿ ಪುನರ್ವವಸತಿ ಕೇಂದ್ರದಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಅ ಧಿಕಾರಿಗಳ ಕಚೇರಿ ಆವರಣದಲ್ಲಿ ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾ  ಪಥದ ಅಡಿಗಲ್ಲು ಸಮಾರಂಭದ ಭೂಮಿಪೂಜೆ ಸಮಾರಂಭದಲ್ಲಿ ಸಾವಳಗಿ ಗ್ರಾಮಸ್ಥರು ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರು.

Advertisement

ಸಾವಳಗಿ ಹೋಬಳಿಯಲ್ಲಿ ಬರುವ 24 ಗ್ರಾಮಗಳಲ್ಲಿ ಬಸ್‌ ನಿಲ್ದಾಣಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳ ಅಂಕಿ-ಅಂಶಗಳನ್ನು ನೀಡುವ ಮೂಲಕ ಕೊರೊನಾ ಸಂದರ್ಭದಲ್ಲಿ ರಾಜ್ಯ ಸರಕಾರಕ್ಕೆ ಎರಡು ಎಕರೆ ಜಮೀನು ನೀಡಿರುವ ದಾಖಲಾತಿ ಹಸ್ತಾಂತರಿಸಿದರು. ಡಿಎಸ್‌ಎಸ್‌ ರಾಜ್ಯ ಮುಖಂಡ ರಾಜು ಮೇಲಿನಕೇರಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಸುಭಾಷ ಪಾಟೋಳಿ ಸಹಿತ ಗ್ರಾಮಸ್ಥರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next