ಅಫಜಲಪುರ: ತಾಲೂಕಿನಾದ್ಯಂತ ಸರ್ಕಾರಿ ಯೋಜನೆ ಅಡಿಯಲ್ಲಿ ಸ್ಪಿಂಕ್ಲರ್ ಪೈಪ್‌ಗ್ಳಿಗಾಗಿ ರೈತರಿಂದ ಹಣ ಕಟ್ಟಿಸಿಕೊಂಡು ಪೈಪ್‌ಗ್ಳನ್ನು ನೀಡದೆ ಸತಾಯಿಸಿದ್ದಲ್ಲದೇ ಈಗ ಹಣ ಮರಳಿ ನೀಡುವುದಾಗಿ ಹೇಳಲಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾದಂತಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ರಮೇಶ ಹೂಗಾರ ಆರೋಪಿಸಿದರು.
ಕಲಬುರಗಿ ಜಂಟಿ ಕೃಷಿ ನಿದೇರ್ಶಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಸ್ಪಿಂಕ್ಲರ್‌ಗಾಗಿ ರೈತರಿಂದ ಹಣ ಕಟ್ಟಿಸಿಕೊಂಡು ವರ್ಕ ಆರ್ಡರ್ ತೆಗೆಯದೆ, ಪೈಪ್‌ಗ್ಳನ್ನು ನೀಡದೇ ಸತಾಯಿಸಿ ರೈತರಿಗೆ ಹಣ ಮರಳಿ ನೀಡುತ್ತೇವೆ ಎನ್ನುತ್ತಿರುವುದು ಎಷ್ಟು ಸರಿ? ಸ್ಪಿಂಕ್ಲರ್ ಅವಶ್ಯಕತೆ ಇರುವ ರೈತರಿಗೆ ಸಮಸ್ಯೆಯಾಗಿದೆ. ಇದನ್ನು ಮೇಲಧಿಕಾರಿಗಳು ಗಮನಿಸಿ ಸಮಸ್ಯೆ ಸರಿಪಡಿಸುವ ಕೆಲಸ ಮಾಡಬೇಕು. ಅಲ್ಲದೇ ತಾಲೂಕಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಕಡಿಮೆ ಬೀಳದಂತೆ ನೋಡಿಕೊಳ್ಳಬೇಕು. ರಸಗೊಬ್ಬರ, ಬೀಜ ನೀಡುವಲ್ಲಿ ಗುಣಮಟ್ಟ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ಮನವಿ ಮಾಡಿದರು.
ಈ ವೇಳೆ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಭೀಮರಾಯಗೌಡ ಪಾಟೀಲ, ಮುಂತಾದವರು ಇದ್ದರು.