Advertisement

ವಾಣಿಜ್ಯಶಾಸ್ತ್ರ ಬಿಎಡ್, ಟಿಇಟಿ ಪದವೀಧರರಿಗೆ ಶಿಕ್ಷಕರ ನೇಮಕಾತಿಗೆ ಪರಿಗಣಿಸುವಂತೆ ಒತ್ತಾಯಿಸಿ ಶಾಸಕರಿಗೆ ಮನವಿ

03:34 PM Dec 04, 2022 | Team Udayavani |

ಕುರುಗೋಡು: ವಾಣಿಜ್ಯಶಾಸ್ತ್ರ ಬಿ.ಎಡ್. ಮತ್ತು ಟಿಇಟಿ ಪದವಿದರರಿಗೆ ಶಿಕ್ಷಕರ ನೇಮಕಾತಿ ಅರ್ಹತೆಗೆ ಪರಿಗಣಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಎಂ. ಸೂಗೂರು ಭಾಗದ ಪದವಿ ವಿದ್ಯಾರ್ಥಿಗಳು ಶಾಸಕ ಎಂ. ಎಸ್. ಸೋಮಲಿಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಪದವಿ ವಿದ್ಯಾರ್ಥಿ ಮುದಿಯಪ್ಪ ನಾಯಕ ಮಾತನಾಡಿ, ಬಿ.ಕಾಂ. ಮತ್ತು ಬಿ.ಬಿ.ಎಂ. ಪದವೀಧರರಿಗೆ 2015 ರಲ್ಲಿ ಬಿ.ಎಡ್. ಪದವಿ ಮಾಡಲು ಅವಕಾಶ ಕಲ್ಪಿಸಿತ್ತು, ಅದರಂತೆ 2020 ರಿಂದ ಶಿಕ್ಷಕರ ಅರ್ಹತಾ ಪರೀಕ್ಷೆ (ಸಮಾಜ ವಿಜ್ಞಾನ) ಬರೆಯಲು ಅವಕಾಶ ಕೂಡ ನೀಡಲಾಯಿತು. ಅಲ್ಲಿಂದ 2022 ವರೆಗೆ ಎರಡು ಶಿಕ್ಷಕರ ನೇಮಕಾತಿ ನಡೆದಿದ್ದು, ಅವುಗಳಲ್ಲಿ ಅವಕಾಶ ನೀಡದೆ ವಂಚಿತರನ್ನಾಗಿ ಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಬಿ.ಕಾಂ. ಮತ್ತು ಬಿ.ಬಿ.ಎಂ. ಪದವೀಧರರಿಗೆ 2022 ನೇಮಕಾತಿಗೆ ಪರಿಗಣಿಸುವಂತೆ ಧಾರವಾಡ ನ್ಯಾಯ ಪೀಠ ಆದೇಶ ಹೊರಡಿಸಿದರು. ಇದನ್ನು ಸರ್ಕಾರ ಪರಿಗಣಿಸದೆ ಲೋಪವೆಸಗಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಅಲ್ಲದೆ ಹರಿಯಾಣ ಮತ್ತು ಉತ್ತರ ಪ್ರದೇಶ ದಲ್ಲಿ ವಾಣಿಜ್ಯ ಪದವೀಧರರಿಗೆ ಶಿಕ್ಷಕರ ನೇಮಕಾತಿಯಲ್ಲಿ ಅವಕಾಶ ನೀಡಿದೆ. ಆದರೆ ಇಲ್ಲಿ ಜಾರಿಯಾಗದಿರುವುದು ನಿಜಕ್ಕೂ ದುರಂತ. 2015 ರಿಂದ ಬಿ.ಎಡ್. ಮತ್ತು 2020 ರಿಂದ ಟಿ.ಇ.ಟಿ. ಯಲ್ಲಿ ಅವಕಾಶ ನೀಡಿ ನೇಮಕಾತಿಯಲ್ಲಿ ಅವಕಾಶ ನೀಡದಿರುವುದಕ್ಕೆ ಕಾರಣವಾದರೂ ಏನು ಎಂದು ಪ್ರಶ್ನಿಸಿದರು.

ಮುಂಬರುವ ಪದವೀಧರ ಮತ್ತು ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಗಳಲ್ಲಿ ವಾಣಿಜ್ಯ ಶಾಸ್ತ್ರ ಪದವೀಧರರಿಗೆ ಅವಕಾಶ ನೀಡಬೇಕು. ಒಂದು ವೇಳೆ ಇಲ್ಲವಾದಲ್ಲಿ ರಾಜ್ಯದ್ಯಂತ ಪದವೀಧರರಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Advertisement

ಪ್ರಾರಂಭದಲ್ಲಿ ಮುಖ್ಯ ರಸ್ತೆಯಿಂದ ಘೋಷಣೆ ಕೂಗುತ್ತಾ ಶಾಸಕರ ಮನೆ ತಲುಪಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವರಾಜ ಎಂ., ಹಜರತ್, ತಿಪ್ಪೇಸ್, ದೇವರಾಜ ಕೆ.ಆರ್., ಜಡಿಯಪ್ಪ, ಸಿದ್ದು ಹಾಗೂ ಇತರ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next