Advertisement

ಅತಿಕ್ರಮಣ ತೆರವಿಗೆ ಮನವಿ

06:14 PM Feb 17, 2022 | Shwetha M |

ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣ ವ್ಯಾಪ್ತಿಯ ಸರ್ವೇ ನಂ. 615ರಲ್ಲಿರುವ ಸರ್ಕಾರಿ ಮಸಣ ಘಾಟ ಅನ್ನು ಕೆಲವು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದಾರೆ. ಕೂಡಲೇ ಈ ಜಾಗವನ್ನು ಸರ್ಕಾರದ ವತಿಯಿಂದಲೇ ಸರ್ವೇ ಮಾಡಿಸಿ ಅತಿಕ್ರಮಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಯುವ ಜನ ಸೇನೆ ಪದಾಧಿಕಾರಿಗಳು, ಸದಸ್ಯರು ಬುಧವಾರ ಶಿರಸ್ತೇದಾರ್‌ ಎ.ಬಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

Advertisement

ಉತಾರೆಯಲ್ಲಿ ಮಸಮ ಘಾಟ ಪ್ರದೇಶ ಎಂದು ದಾಖಲಿದೆ. ಕೆಲವು ಪಟ್ಟಭದ್ರರು ತಮ್ಮ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಪಟ್ಟಣ ಪಂಚಾಯಿತಿಯ ಫಾರ್ಮ ನಂಬರ್‌ 9ರಲ್ಲಿ ತಮ್ಮ ಹೆಸರನ್ನು ಸೃಷ್ಟಿಸಿ ಬೇರೆಯವರಿಗೆ ಪರಭಾರೆ ಮಾಡಿದ್ದಾರೆ. ಕೆಲವು ಖಾಸಗಿ ವ್ಯಕ್ತಿಗಳು ಈ ಸರ್ವೇಯಲ್ಲಿ ಸ್ವಂತ ಕಟ್ಟಡಗಳನ್ನು ಹೊಂದಿದ್ದಾರೆ. ಇನ್ನೂ ಹಲವರು ಖಾಲಿ ಜಾಗ ವಶಪಡಿಸಿಕೊಂಡಿದ್ದು ಸ್ಮಶಾನ ಜಮೀನಿನಲ್ಲಿ ಬೇಕಾಬಿಟ್ಟಿ ಕಟ್ಟಡಗಳು ನಿರ್ಮಾಣಗೊಂಡಿವೆ. ಕೂಡಲೇ ತಹಶೀಲ್ದಾರ್‌ ಅವರು ಈ ಬಗ್ಗೆ ತನಿಖೆಗೆ ಆದೇಶ ನೀಡಬೇಕು. ಸದರಿ ಜಮೀನನ್ನು ಸ್ಮಶಾನಕ್ಕೆ ಮೀಸಲಿಡಬೇಕು. ಇದು ನಾಲತವಾಡದ ಜನತೆಯ ಒತ್ತಾಯವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸದೇ ಹೋದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರಾಜ್ಯಾಧ್ಯಕ್ಷ ಶಿವಾನಂದ ವಾಲಿ, ತಾಲೂಕು ಅಧ್ಯಕ್ಷ ಪರಶುರಾಮ ವಾಲಿ, ಅನಿಲ ಧರಿಗೋಳ, ಕಮಲಾ ಭಜಂತ್ರಿ, ನಿಖೀಲ ಮಲಗಲದಿನ್ನಿ, ರವಿ ಮನಗೂಳಿ, ಮಂಜು ಭಜಂತ್ರಿ, ಮಂಜು ಗುರುವಿನ್‌, ಬಸು ಧರಿಗೋಳ, ಅಕ್ಷಯ ಢವಳಗಿ, ರೇಖಾ ಶಿರೋಳ, ಅನಿಲ ರಾಠೊಡ, ಸಿದ್ದು ಚಲವಾದಿ, ಪವಿತ್ರಾ ನಾಲತವಾಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next