Advertisement

ಕಾಳಗಿಗೆ ಮೂಲಭೂತ ಸೌಕರ್ಯಕ್ಕೆ ಮನವಿ

03:29 PM Jul 26, 2022 | Team Udayavani |

ಕಾಳಗಿ: ಪಟ್ಟಣದಲ್ಲಿ ವಿದ್ಯುತ್‌ ದೀಪ, ಶೌಚಾಲಯ, ಶುದ್ಧ ಕುಡಿಯುವ ನೀರು ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಪಪಂ ಮುಖ್ಯಾ ಧಿಕಾರಿ ವೆಂಕಟೇಶ ತೆಲಾಂಗ್‌ ಅವರಿಗೆ ಯುವ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.

Advertisement

ಪಟ್ಟಣದ ಬಸ್‌ ನಿಲ್ದಾಣದಿಂದ ಅಂಬೇ ಡ್ಕರ್‌ ವೃತ್ತದ ವರೆಗೆ ಹೈಮಾಸ್ಕ್ ಮತ್ತು ಪಟ್ಟಣದ ಮುಖ್ಯ ಬೀದಿಗಳಲ್ಲಿನ ವಿದ್ಯುತ್‌ ಕಂಬಗಳಿಗೆ ವಿದ್ಯುತ್‌ ಬಲ್ಪ್ ಹಾಕಬೇಕು. ನಿರಂತರವಾಗಿ ಮಳೆ ಸುರಿಯುತ್ತಿರುವುದ ರಿಂದ ವಿದ್ಯುತ್‌ ಕಂಬಗಳನ್ನು ಮುಟ್ಟಿದರೆ ಶಾಕ್‌ ಹೊಡೆಯುತ್ತಿವೆ. ಆದ್ದರಿಂದ ಅಪಾಯ ಸಂಭವಿಸುವ ಮೊದಲೆ ಸಮಸ್ಯೆ ಬಗೆಹರಿಸಬೇಕು ಎಂದು ಕೋರಿದರು.

ಬಸ್‌ ನಿಲ್ದಾಣದಲ್ಲಿ ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು. ಅಂಬೇಡ್ಕರ್‌ ವೃತ್ತ ಹಾಗೂ ಕಾಳೇಶ್ವರ ದೇವಸ್ಥಾನದಲ್ಲಿ ಹೈಮಾಸ್ಟ್‌ ದೀಪ ಅಳವಡಿಸಬೇಕು. ರಾಮನಗರದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಮಹಿಳಾ ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಯುವ ಕರ್ನಾಟಕ ರಕ್ಷಣಾ ಸೇನೆ ತಾಲೂಕಾಧ್ಯಕ್ಷ ದತ್ತು ಗುತ್ತೇದಾರ, ಉಪಾಧ್ಯಕ್ಷ ಅನಿಲಕುಮಾರ ಎ ಗುತ್ತೇದಾರ, ಕಾರ್ಯದರ್ಶಿ ಇಬ್ರಾಹಿಂ ಶಾಹಾ, ಗ್ರಾಮ ಘಟಕದ ಅಧ್ಯಕ್ಷ ಅವಿನಾಶ ಗುತ್ತೇದಾರ, ರಾಜು ಜಾಧವ, ಚಿತ್ರಶೇಖರ ದಂಡೋತಿಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next